ರಾಜ್ಯ ರಾಜಧಾನಿಯಲ್ಲಿ 700 ಕ್ಕೂ ಹೆಚ್ಚು ಡ್ರಿಂಕ್ & ಡ್ರೈವ್ ಪ್ರಕರಣ ದಾಖಲು

Team Newsnap
1 Min Read

ಬೆಂಗಳೂರು : ಟ್ರಾಫಿಕ್ ಪೊಲೀಸರು ‘ಮದ್ಯ’ ಸೇವಿಸಿ ವಾಹನ ಚಲಾಯಿಸಿದ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ್ದು , 717 ಡ್ರಿಂಕ್ ಆಯಂಡ್ ಡ್ರೈವ್ ಪ್ರಕರಣಗಳನ್ನು ಬೆಂಗಳೂರು ನಗರದಾದ್ಯಂತ ದಾಖಲಿಸಿದ್ದಾರೆ.

ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ ಡಿಸೆಂಬರ್ 21 ರಿಂದ ಆರಂಭವಾದ ತಪಾಸಣೆಯಲ್ಲಿ 717 ಡ್ರಿಂಕ್ ಆಯಂಡ್ ಡ್ರೈವ್ ಪ್ರಕರಣಗಳು ವಿವಿಧ ಸ್ಥಳಗಳಲ್ಲಿ ಪತ್ತೆಯಾಗಿದೆ.

ಡಿಸೆಂಬರ್ 30 ರವರೆಗೆ 27,280 ಕ್ಕೂ ಹೆಚ್ಚು ವಾಹನಗಳನ್ನು ಬೆಂಗಳೂರಿನ ನಾಲ್ಕು ವಿಭಾಗಗಳಲ್ಲಿ ಪರಿಶೀಲಿಸಿ , 717 ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.ನೇಣು ಬಿಗಿದುಕೊಂಡು ಮೂಡಿಗೆರೆ ‘BEO’ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ

167 ಪಾನಮತ್ತ ಚಾಲಕರ ವಿರುದ್ಧ ದಕ್ಷಿಣ ವಿಭಾಗದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು ,30 ಪ್ರಕರಣಗಳನ್ನು ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸರು ದಾಖಲಿಸಿದ್ದಾರೆ .ದಕ್ಷಿಣದ ಟ್ರಾಫಿಕ್ ಪೊಲೀಸ್ ಠಾಣೆ ಮತ್ತು ತಲಘಟ್ಟಪುರ ಟ್ರಾಫಿಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 18 ಪ್ರಕರಣಗಳನ್ನು ದಾಖಲಿಸಲಾಗಿದೆ.

Share This Article
Leave a comment