ಬೆಂಗಳೂರಿನಿಂದ 3000ಕ್ಕೂ ಹೆಚ್ಚು ಸೋಂಕಿತರು ನಾಪತ್ತೆ – ಸಚಿವ ಆರ್. ಅಶೋಕ್

Team Newsnap
1 Min Read
Mandya District Minister R. Ashok is out of responsibility ಮಂಡ್ಯ ಜಿಲ್ಲಾಮಂತ್ರಿ ಜವಾಬ್ದಾರಿಯಿಂದ ಸಚಿವ ಆರ್ . ಅಶೋಕ್ ಔಟ್

ಬೆಂಗಳೂರಿನಿಂದ 3000ಕ್ಕೂ ಹೆಚ್ಚು ಸೋಂಕಿತರು ಕಾಣೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

3000ಕ್ಕೂ ಹೆಚ್ಚು ಕೊರೊನಾವೈರಸ್ ಸೋಂಕಿತರು ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಾವು ನೀಡಿರುವ ವಿಳಾಸದಿಂದಲೂ ನಾಪತ್ತೆ ಆಗಿದ್ದಾರೆ. ಪೊಲೀಸರು ಕಾಣೆಯಾಗಿರುವ ಸೋಂಕಿತರನ್ನು ಪತ್ತೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೊರೊನಾವೈರಸ್ ಸೋಂಕು ತಗುಲಿರುವ ಬಗ್ಗೆ ಸಾರ್ವಜನಿಕವಾಗಿ ಹೇಳದೇ ಮುಚ್ಚಿಡುತ್ತಿದ್ದಾರೆ.
ಆ ಮೂಲಕ ಕೊವಿಡ್-19 ಸೋಂಕು ಹರಡುವುದಕ್ಕೆ ನೇರವಾಗಿ ಕಾರಣೀಕರ್ತರಾಗುತ್ತಿದ್ದಾರೆಂದರು.

ನಾಪತ್ತೆಯಾಗಿರುವ ಸೋಂಕಿತರು ತಮ್ಮ ಮೊಬೈನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಮುಂದು ಆರೋಗ್ಯ ಸ್ಥಿತಿ ಗಂಭೀರವಾದ ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ಬರುತ್ತಾರೆ. ಆಗ ಗಂಭೀರ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳುವುದು ಕಷ್ಟಸಾಧ್ಯವಾಗಬಹುದು ಎಂದು ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಿಂದ ಕಾಣೆಯಾಗಿರುವ 3000ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್ ನಿಂದ ಆರೋಗ್ಯ ಸ್ಥಿತಿ ಹದಗೆಡುವುದಕ್ಕೂ ಮೊದಲು ಎಚ್ಚೆತ್ತುಕೊಳ್ಳಿರಿ. ನಿಮ್ಮ ಮೊಬೈಲ್ ಸ್ವಿಚ್ ಆನ್ ಮಾಡಿ, ಸರ್ಕಾರದಿಂದ ನೀಡುವ ಔಷಧಿಗಳನ್ನು ಪಡೆದುಕೊಳ್ಳಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article
Leave a comment