November 20, 2024

Newsnap Kannada

The World at your finger tips!

WhatsApp Image 2022 10 31 at 8.31.41 PM

Morbi Bridge disaster: 9 people arrested ಮೋರ್ಬಿ ಸೇತುವೆ ದುರಂತ: 9 ಮಂದಿ ಬಂಧನ ‌ – ಟೆಂಡರ್‌ ಪಡೆದವರೇ ಬೇರೆ - ರಿಪೇರಿ ಮಾಡಿದ ಕಂಪನಿಯೇ ಬೇರೆ

ಮೋರ್ಬಿ ಸೇತುವೆ ದುರಂತ: 9 ಮಂದಿ ಬಂಧನ ‌ – ಟೆಂಡರ್‌ ಪಡೆದವರೇ ಬೇರೆ – ರಿಪೇರಿ ಮಾಡಿದ ಕಂಪನಿಯೇ ಬೇರೆ

Spread the love

ಗುಜರಾತ್‍ನ ಮೋರ್ಬಿ ಪಟ್ಟಣದಲ್ಲಿದ್ದ ಪುರಾತನ ತೂಗುಸೇತುವೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ತೂಗು ಸೇತುವೆಯನ್ನು ನವೀಕರಿಸಿದ್ದ ಒರೆವಾ ಕಂಪನಿಯ ಅಧಿಕಾರಿಗಳು, ಟಿಕೆಟ್‌ ಮಾರಾಟ ಮಾಡಿದ್ದ ವ್ಯಕ್ತಿ ಮತ್ತು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.ಮೈಸೂರಿನಲ್ಲಿ ಇಸ್ಪೀಟ್‌ ಆಡುತ್ತಿದ್ದ ಜೆಡಿಎಸ್‌ ಮುಖಂಡ ಕುಳಿತಲ್ಲೇ ಕುಸಿದು ಸಾವು : ವಿಡಿಯೋ ನೋಡಿ

2022 ರ ಮಾರ್ಚ್‌ ನಲ್ಲಿ ಮೊರ್ಬಿ ನಗರಸಭೆ ವಾಚ್‌ ತಯಾರಿಕಾ ಸಂಸ್ಥೆ ಒರೆವಾ ಜೊತೆ 15 ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿತ್ತು. ಸರ್ಕಾರದ ಟೆಂಡರ್‌ ಪಡೆದ ಒರೆವಾ ಕಂಪನಿ ಸೇತುವೆ ದುರಸ್ತಿ ಕೆಲಸವನ್ನು ಯಾವುದೇ ದಾಖಲೆಗಳಿಲ್ಲದ ದೇವಪ್ರಕಾಶ್‌ ಸೊಲ್ಯೂಷನ್‌ ಸಂಸ್ಥೆಗೆ ನೀಡಿತ್ತು.

8 ರಿಂದ 12 ತಿಂಗಳ ಕಾಲ ಸೇತುವೆಯನ್ನು ಮುಚ್ಚಿ ದುರಸ್ತಿ ಮಾಡಬೇಕೆಂದು ಒಪ್ಪಂದದಲ್ಲಿ ಸೂಚಿಸಲಾಗಿತ್ತು. ಆದರೆ ಕೇವಲ 5 ತಿಂಗಳಿನಲ್ಲಿ ನವೀಕರಣಗೊಂಡು ಅ.26 ರಂದು ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಷರತ್ತು ಉಲ್ಲಂಘಿಸಿ ಸಂಸ್ಥೆ ಬೇಜವಾಬ್ದಾರಿ ಮತ್ತು ಅಸಡ್ಡೆ ವರ್ತನೆ ತೋರಿದೆ ಎಂದು ಎಫ್‌ಐಆರ್‌ ದಾಖಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಮಾತ್ರ ಪೊಲೀಸರು ಯಾರ ಹೆಸರನ್ನು ಉಲ್ಲೇಖಿಸಿಲ್ಲ.

Copyright © All rights reserved Newsnap | Newsever by AF themes.
error: Content is protected !!