ನಾಳೆಯಿಂದ ಮೊಬೈಲ್‌ನಲ್ಲೇ ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್ ಖರೀದಿಸಿ

Team Newsnap
1 Min Read

ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಕೊಡುಗೆ ನೀಡಿದೆ.

ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುತ್ತಿದ್ದ ಪ್ರಯಾಣಿಕರ ಸಮಯ ಉಳಿತಾಯ ಮಾಡಲು ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಬಳಸಿ ಟಿಕೆಟ್ ಖರೀದಿಸುವ ವಿಶೇಷ ಸೌಲಭ್ಯವನ್ನು ಜಾರಿಗೆ ತಂದಿದೆ.ಮೋರ್ಬಿ ಸೇತುವೆ ದುರಂತ: 9 ಮಂದಿ ಬಂಧನ ‌ – ಟೆಂಡರ್‌ ಪಡೆದವರೇ ಬೇರೆ – ರಿಪೇರಿ ಮಾಡಿದ ಕಂಪನಿಯೇ ಬೇರೆ 

ಮಂಗಳವಾರದಿಂದ (ನವೆಂಬರ್ 1) ಮೊಬೈಲ್‌ನಲ್ಲಿ ಟಿಕೆಟ್ ಖರೀದಿಸಬಹುದಾಗಿದ್ದು, ಕ್ಯೂ ಆರ್ ಕೋಡ್ ಮೂಲಕ ಎಂಟ್ರಿ-ಎಕ್ಸಿಟ್ ಅವಕಾಶ ಪಡೆಯಬಹುದಾಗಿದೆ. ಇದು ಪ್ರಯಾಣಿಕರ ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ದೂರಮಾಡುವ ಉದ್ದೇಶವನ್ನೂ ಹೊಂದಿದೆ.

ಮೊಬೈಲ್ ಅಪ್ಲಿಕೇಶನ್ ಬಳಸಿ ಟಿಕೆಟ್ ಖರೀದಿಸಿ, ಮೊಬೈಲ್ ನಲ್ಲೇ ಎಂಟ್ರಿ ಅಥವಾ ಎಕ್ಸಿಟ್ ಗೇಟ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಿ ಪ್ರವೇಶ ಪಡೆಯಬಹುದಾಗಿದೆ.

Share This Article
Leave a comment