ಉಗ್ರ ಸಂಘಟನೆಗಳ ಬಲಕ್ಕೆ ಹಣದ ಹರಿವು : ಅಮೇರಿಕಾ ದಿಗ್ಭಂದನ

Team Newsnap
1 Min Read

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಸೇರಿದಂತೆ ವಿಶ್ವದ ಉಗ್ರರಿಗೆ ಪಾಲಿನ ಹಣದ ಹರಿವಿಗೆ ಅಮೇರಿಕಾ ದಿಗ್ಭಂದನ ಹೇರಿದೆ.

ಅಮೇರಿಕಾದ ಹಣಕಾಸು ಇಲಾಖೆ ವಿದೇಶಿ ಆಸ್ತಿ ನಿಯಂತ್ರಣ ವಿಭಾಗ ಬಿಡುಗಡೆ ಮಾಡಿರುವ 2019 ರ ವರದಿಯಲ್ಲಿ ಈ ಸಂಗತಿ ಬಹಿರಂಗವಾಗಿದೆ.

63 ಮಿಲಿಯನ್ ಅಮೇರಿಕಾ ಡಾಲರ್ ಅಂದರೆ 466 ಕೋಟಿ ರು ಉಗ್ರರಿಗೆ ಹರಿದು ಹೋಗುವುದಕ್ಕೆ ದಿಗ್ಭಂದನ ವಿಧಿಸಲಾಗಿದೆ.

ಯಾವ ಉಗ್ರರಿಗೆ ಎಷ್ಟು ಹಣ ?

  • ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಿ ಸಂಘಟನೆಗೆ 3 ಲಕ್ಷ 42 ಸಾವಿರ ಡಾಲರ್,

*ಜೈಷ್ ಎ ಮೊಹಮ್ಮದ್ ಗೆ 1,725 ಡಾಲರ್,

  • ಹರ್ಕಟ್ ಉಲ್ ಮುಜಾಹಿದ್ದೀನ್ ಅಲ್ ಇಸ್ಲಾಮಿ ಖಜಾನೆ ಸೇರುತ್ತಿದ್ದ 54,798 ಡಾಲರ್ ಹಣಕ್ಕೆ ಅಮೇರಿಕಾ ಬ್ರೇಕ್ ಹಾಕಿದೆ.

ಅಮೇರಿಕಾ ನಿಯಂತ್ರಣ ಹೇರಿದ ಕಾರಣ ವಿಶ್ವದ ಎಲ್ಲಾ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಅವುಗಳ ಶಕ್ತಿ ಸಹಜವಾಗಿಯೇ ಕುಗ್ಗಿ ಹೋಗಲಿದೆ. ಆರ್ಥಿಕ ಹರಿವಿಗೆ ಕಟ್ಟೆ ಹಾಕಿರುವುದರಿಂದ ಉಗ್ರರು ತಡಬಡಿಸುತ್ತಿದ್ದಾರೆ.

Share This Article
Leave a comment