ಈ ಬಾರಿಯ ಜನ್ಮದಿನವನ್ನು ನಾನು ಎಂದಿಗೂ ಮರೆಯಲಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸದಿಂದ ಹೇಳಿದ್ದಾರೆ.
ಜನ್ಮದಿನಗಳು ಬಂದು ಹೋಗುತ್ತವೆ. ನಾನು ಇಂತಹ ವಿಷಯಗಳಿಂದ ದೂರ ಉಳಿದಿದ್ದೇನೆ. ಆದರೆ ಈ ಬಾರಿಯ ಜನ್ಮದಿನವನ್ನು ಎಂದಿಗೂ ಮರೆಯಲಾರೆ ಎಂದು ಮನದಾಳದ ಭಾವನೆಯನ್ನು ಹೊರಹಾಕಿದ್ದಾರೆ.
ಮೋದಿಯವರ 71ನೇ ಜನ್ಮದಿನವಾದ ಶುಕ್ರವಾರ ದೇಶದಲ್ಲಿ 2.5 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಇದರಿಂದ ಪ್ರಧಾನಿಯವರ ಮನತುಂಬಿಬಂದಿದೆ. ಈ ಸಾಧನೆಯನ್ನು ಬಲಿಷ್ಠ ರಾಷ್ಟ್ರಗಳೂ ಮಾಡಲು ಆಗಲಿಲ್ಲ ಎಂದು ಹೆಮ್ಮೆಯಿಂದ ನುಡಿದಿದ್ದಾರೆ.
ನನ್ನ ಜನ್ಮದಿನದಂದು 2.5 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ. ಇದನ್ನು ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ ಎಂದು ಲೇವಡಿ ಮಾಡಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು