ಏ​ 8, 9ರಂದು ಮೈಸೂರಿಗೆ ಮತ್ತೆ ಮೋದಿ ಆಗಮನ

Team Newsnap
1 Min Read
Modi will return to Mysore on 8th and 9th ಏ​ 8, 9ರಂದು ಮೈಸೂರಿಗೆ ಮತ್ತೆ ಮೋದಿ ಆಗಮನ

ಮುಂದಿನ ವಿಧಾನ ಸಭೆ ಚುನಾವಣೆಗೆ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಮತ್ತೆ ಮತ್ತೆ ರಾಜ್ಯಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಏ​ 8, 9ರಂದು ಮತ್ತೆ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ.

ಮೋದಿ ಕಾರ್ಯಕ್ರಮದ ವಿವರ ಹೇಗಿದೆ :

ಮೈಸೂರಿನಲ್ಲಿ ಹುಲಿ ಸಂರಕ್ಷಣಾ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಏಪ್ರಿಲ್​ 8ರ ರಾತ್ರಿ 8ಗಂಟೆಗೆ ಮೈಸೂರಿಗೆ ಆಗಮಿಸಲಿದ್ದಾರೆ .

ಮೋದಿಯವರು ಮೈಸೂರಿನ ರ‍್ಯಾಡಿಸನ್​ ಬ್ಲೂ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಏ.9ರ ಬೆಳಗ್ಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಏ.9ರ ಬೆಳಗ್ಗೆ 11 ಗಂಟೆಗೆ ಕೆಎಸ್​ಒಯು ಘಟಿಕೋತ್ಸವ ಭವನಕ್ಕೆ ಭೇಟಿ ನೀಡಲಿದ್ದಾರೆ .

ಹುಲಿ ಸಂರಕ್ಷಣಾ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಾಮರಾಜನಗರ ಜಿಲ್ಲೆ ಬಂಡೀಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಏ.9ರ ಬೆಳಗ್ಗೆ 7.30ಕ್ಕೆ ಬಂಡೀಪುರ ಉದ್ಯಾನವನಕ್ಕೆ ಭೇಟಿ ನೀಡಲಿದ್ದು, ಬಳಿಕ ಸಫಾರಿ ಮಾಡಲಿದ್ದಾರೆ. ನೀಲಗಿರಿಸ್​​ ಅರಣ್ಯ ಪ್ರದೇಶಕ್ಕೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ನಂತರ ಮೈಸೂರಿಗೆ ವಾಪಸ್​ ಆಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಮೈಸೂರುಜಿಲ್ಲೆಯ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ವಹಿಸುವ ಮೂಲಕ ಹೆಚ್ಚಿನ ಭದ್ರತೆಯನ್ನು ವಹಿಸಲಿದೆ.ಇದನ್ನು ಓದಿ –ಚುನಾವಣೆ ಎಫೆಕ್ಟ್‌ : ಮೇ 10, 13ಕ್ಕೆ ನಿಗದಿಯಾದ ಮದುವೆ, ಶುಭ ಸಮಾರಂಭಗಳೂ ರದ್ದು

Share This Article
Leave a comment