ಪ್ರಧಾನಿ ನರೇಂದ್ರ ಮೋದಿ ಏ.30 ರಂದು ಮೈಸೂರಿಗೆ ಆಗಮಿಸಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ.
ಬೇಲೂರಿನಿಂದ ಹೆಲಿಪ್ಯಾಡ್ ಮೂಲಕ ಮೋದಿ ಅವರು ಮೈಸೂರಿನ ಮಹಾರಾಜ ಮೈದಾನಕ್ಕೆ ಬರಲಿದ್ದಾರೆ, ಮೈಸೂರಿನಲ್ಲಿ ಏ.30 ರಂದು ಪ್ರಧಾನಿ ಮೋದಿ 4 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ.
ಗನ್ ಹೌಸ್ ನಿಂದ ಮೋದಿ ರ್ಯಾಲಿ ಆರಂಭವಾಗಲಿದೆ ಹತ್ತಾರು ಕಲಾ ತಂಡಗಳು ಮೋದಿಗೆ ಸ್ವಾಗತ ಕೋರಲಿದೆ. ಗನ್ ಹೌಸ್ ನಿಂದ ಸಂಸ್ಕೃತ ಪಾಠಶಾಲೆ, ನಗರ ಪಾಲಿಕೆ ಸರ್ಕಲ್ ಮೂಲಕ ಸಿಟಿ ಬಸ್ ಸ್ಟ್ಯಾಂಡ್, ಕೆ.ಆರ್.ಸರ್ಕಲ್ ಮಾರ್ಗದಲ್ಲಿ ರ್ಯಾಲಿ ನಡೆಯಲಿದೆ. ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.