ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ

Team Newsnap
1 Min Read

ನವದೆಹಲಿ : ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ (Congress) ಈಗ ಉತ್ತರ-ದಕ್ಷಿಣದ ಹೆಸರಿನಲ್ಲಿ ದೇಶವನ್ನು ಒಡೆಯಲು ಮುಂದಾಗುತ್ತಿದೆ ಎಂದು ಹೇಳುವ ಮೂಲಕ ಡಿಕೆ ಸುರೇಶ್‌ (DK Suresh) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮಗೆ ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ , ಎಲ್ಲರಿಗೂ ಇದು ಸ್ಪೂರ್ತಿ ನೀಡುವ ಜಾಗ.

ದೇಹದ ಒಂದು ಅಂಗವು ಕಾರ್ಯ ನಿರ್ವಹಿಸದಿದ್ದರೆ, ಇಡೀ ದೇಹವನ್ನು ನಿಷ್ಕ್ರಿಯವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ದೇಶದ ಒಂದು ಮೂಲೆಯಲ್ಲಿ ಅಭಿವೃದ್ದಿಯಿಲ್ಲದಿದ್ದರೆ ದೇಶ ಅಭಿವೃದ್ಧಿಯಾಗಲಾರದು ಎಂದು ಹೇಳಿದರು.

ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಹೊಸ ಕಥೆಗಳು ಸೃಷ್ಟಿಯಾಗುತ್ತಿದ್ದು , ದೇಶಕ್ಕೆ ಇದಕ್ಕಿಂತ ದೊಡ್ಡ ದೌರ್ಭಾಗ್ಯ ಏನಿದೆ? ರಾಷ್ಟ್ರೀಯ ಪಕ್ಷದಿಂದ ಇಂತಹ ಮನಸ್ಥಿತಿ ಹೊರಬರುತ್ತಿದೆ.

ದೇಶದ ಭವಿಷ್ಯಕ್ಕೆ ಇದು ಅಪಾಯಕಾರಿ ಮತ್ತು ಕಾಂಗ್ರೆಸ್‌ ದೇಶವನ್ನು ವಿಭಜಿಸುವ ಹೇಳಿಕೆ ನೀಡುವ ಹವ್ಯಾಸ ಬೆಳೆಸಿಕೊಂಡಿದೆ ವಾಗ್ದಾಳಿ ನಡೆಸಿದರು.

ರಾಜ್ಯಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ . ವರ್ಷ ಕಾಲ ನಡೆದ ಜಿ20 ವಿವಿಧ ಸಭೆಗಳನ್ನು ಉಲ್ಲೇಖಿಸಿದ ಅವರು, ಜಿ20ಗೆ ಸಂಬಂಧಿಸಿದ ಎಲ್ಲಾ ಸಭೆಗಳನ್ನು ಸರ್ಕಾರ ದೆಹಲಿಯಲ್ಲೇ ನಡೆಸಬಹುದಿತ್ತು , ಆದರೆ ನಾವು ಎಲ್ಲಾ ರಾಜ್ಯಗಳಲ್ಲಿ ಸಭೆ ಆಯೋಜಿಸಿದ್ದೇವೆ.

ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ ,ರಾಜ್ಯದ ಪ್ರಸಿದ್ಧ ಸ್ಥಳಗಳು ವಿದೇಶಿಯರಿಗೆ ತಿಳಿಯಲಿ ಎಂಬ ಕಾರಣ ರಾಜ್ಯಗಳಲ್ಲಿ ಒಂದೊಂದು ಸಭೆ ಆಯೋಜಿಸಿಸಾಲಾಗಿತ್ತು.ಕರ್ನಾಟಕ ರಾಜ್ಯಕ್ಕೆ ದ್ರೋಹ – ಈ ಪ್ರತಿಭಟನೆ ದೇಶದ ಗಮನ ಸೆಳೆಯಲು : CM Siddaramaiah 

ಅಭಿವೃದ್ಧಿ ವಿಚಾರದಲ್ಲಿ ರಾಜ್ಯಗಳು ಒಂದು ಹೆಜ್ಜೆ ಮುಂದೆ ಇಟ್ಟರೆ ನಾನು ಎರಡು ಹೆಜ್ಜೆ ಮುಂದೆ ಇಡುತ್ತೇನೆ ಎಂದು ಪ್ರಧಾನ ಮಂತ್ರಿ ಹೇಳಿದರು.

Share This Article
Leave a comment