ಅಯೋಧ್ಯೆಯಲ್ಲಿ ಮೋದಿ ಮೇನಿಯಾ ಆರಂಭ : ವಿವಿಧ ಯೋಜನೆಗಳಿಗೆ ಚಾಲನೆಗೆ ಸಿದ್ದತೆ

Team Newsnap
1 Min Read

ಅಯೋಧ್ಯೆ : ವಿವಿಧ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಶನಿವಾರ ರಾಮನೂರು ಅಯೋಧ್ಯೆಗೆ ಆಗಮಿಸಿದ್ದಾರೆ.

ನೂತನ ವಿಮಾನ ನಿಲ್ದಾಣ ಹಾಗೂ ಅಭಿವೃದ್ಧಿಪಡಿಸಿದ ರೈಲ್ವೆ ನಿಲ್ದಾಣ ಉದ್ಘಾಟನೆ ನೆರವೇರಿಸುವುದಕ್ಕೂ ಮುನ್ನ ಸುಮಾರು 15 ಕಿಮೀ ರೋಡ್‌ ಶೋ ಆರಂಭಿಸಿದ್ದಾರೆ.

ದೆಹಲಿಯಿಂದ ವಿಶೇಷ ವಿಮಾನದಲ್ಲಿ 10.45ರ ಸುಮಾರಿಗೆ ಮೋದಿ ಅವರು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶಾಲುಹೊದಿಸಿ ಪ್ರಧಾನ ಮಂತ್ರಿಯನ್ನು ಸ್ವಾಗತಿಸಿದರು .

ರೋಡ್‌ ಶೋ ನಂತರ ರೈಲ್ವೆ ನಿಲ್ದಾಣ ಉದ್ಘಾಟಿಸಲಿದ್ದಾರೆ. ಪ್ರಧಾನಿ ರೋಡ್‌ ಶೋ ನಡೆಯಲಿರುವ ರಸ್ತೆಯ ಎರಡೂ ಕಡೆಗಳಲ್ಲಿ ಸಾವಿರಾರು ಜನ ನೆರೆದು ಮೋದಿಯವರನ್ನು ಪುಷ್ಪಾರ್ಚನೆ ಹಾಗೂ ಜಯಘೋಷಗಳಿಂದ ಸ್ವಾಗತಿಸಿದರು. ದೇಶದ ನಾನಾ ಕಡೆಗಳಿಂದ ಬಂದ ಸಾಂಸ್ಕೃತಿಕ ಕಲಾ ತಂಡಗಳು ದಾರಿಯುದ್ದಕ್ಕೂ ತಮ್ಮ ಕಲಾ ಪ್ರದರ್ಶನಗಳನ್ನು ನೀಡಿ ನೋಡುಗರ ಮನಸೂರೆಗೊಂಡವು. ಸುಮಾರು 1,400 ಕಲಾವಿದರು 40ಕ್ಕೂ ಹೆಚ್ಚು ವೇದಿಕೆಗಳಲ್ಲಿ ಸಾಂಸ್ಕೃತಿಕ ನೃತ್ಯ ಪ್ರದರ್ಶನದೊಂದಿಗೆ ಪ್ರಧಾನಿಗಳನ್ನು ಸ್ವಾಗತಿಸಿದವು.ಕುಡಿದ ಮತ್ತಿನಲ್ಲಿ 33 ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು

ಅಯೋಧ್ಯೆಯಲ್ಲಿ ಏನೇನು ಕಾರ್ಯಕ್ರಮ?

  • ಬೆಳಗ್ಗೆ 11:15ಕ್ಕೆ ರೈಲ್ವೆ ನಿಲ್ದಾಣ ಉದ್ಘಾಟನೆ
  • 2 ಹೊಸ ಅಮೃತ್ ಭಾರತ್ & 6 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ
  • 2183 ಕೋಟಿ ರೂ. ಗ್ರೀನ್‌ಫೀಲ್ಡ್ ಟೌನ್‌ಶಿಪ್‌ಗೆ ಅಡಿಗಲ್ಲು
  • 300 ಕೋಟಿ ರೂ. ವಷಿಷ್ಠ ಕುಂಜ್ ವಸತಿ ಯೋಜನೆ
  • ನವೀಕರಣಗೊಂಡಿರುವ ನಯಾಘಾಟ್‌ನಿಂದ ಲಕ್ಷ್ಮಣ ಘಾಟ್ ಉದ್ಘಾಟನೆ
    ( ದೀಪೋತ್ಸವ ಸ್ಥಳ, ಪ್ರವಾಸಿಗರಪಥವಾದ ರಾಮ್ ಕಿ ಪೌಡಿನಿಂದ ರಾಜ್‌ಘಾಟ್, ರಾಜ್‌ಘಾಟ್‌ನಿಂದ ರಾಮ ಮಂದಿರ ರಸ್ತೆ)
  • ಅಯೋಧ್ಯೆ ನಗರದಲ್ಲಿ 4 ಹೊಸ ರಸ್ತೆಗಳ ಉದ್ಘಾಟನೆ
  • ರಾಮಪಥ, ಭಕ್ತಿಪಥ, ಧರ್ಮಪಥ, ಶ್ರೀರಾಮ ಜನ್ಮಭೂಮಿ ಪಥ (ಜೊತೆಗೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಲಖನೌ-ಅಯೋಧ್ಯ ಹೈವೇ, ಅಯೋಧ್ಯ ಬೈಪಾಸ್, ವಾರಣಾಸಿ ಬೈಪಾಸ್, ಖುತಾರ್-ಲಖೀಂಪುರ ಹೈವೇ ಸೇರಿವೆ )
  • ಮಧ್ಯಾಹ್ನ 12:15ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣ ಉದ್ಘಾಟನೆ

Share This Article
Leave a comment