ಮೋಚಾ’ ಸೈಕ್ಲೋನ್ ಎಫೆಕ್ಟ್ : ಮೇ 13 ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

Team Newsnap
1 Min Read

ಬಂಗಾಳಕೊಲ್ಲಿಯಲ್ಲಿ ‘ಮೋಚಾ’ ಚಂಡಮಾರುತ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮೇ 13ರವರೆಗೆ ಭಾರೀ ಮಳೆಯಾಗಲಿದೆ.

ದಕ್ಷಿಣ ಒಳನಾಡು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೇ 8 ಹಾಗೂ 9 ರಂದು ಮಂಡ್ಯ, ದೊಡ್ಡಬಳ್ಳಾಪುರ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಹಾವೇರಿ, ಉಡುಪಿ, ಬೆಂಗಳೂರು ನಗರ,ಕಲಬುರಗಿ, ರಾಯಚೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಕೊಪ್ಪಳ, ಗದಗ, ಚಿತ್ರದುರ್ಗ, ತುಮಕೂರು, ಕೋಲಾರದಲ್ಲಿ ಮಳೆಯಾಗಲಿದೆ.

ಮೇ 10ರಂದು ದಾವಣಗೆರೆ, ಕೊಡಗಿನಲ್ಲಿ ಮಾತ್ರ ಭಾರೀ ಮಳೆ ಬೀಳಲಿದ್ದು, ಮೇ 12. 13ರಂದು ಹಾಸನ, ಬಾಗಲಕೋಟೆಯ ದಕ್ಷಿಣ, ಮಂಡ್ಯದ ದಕ್ಷಿಣ, ತುಮಕೂರು ದಕ್ಷಿಣ, ಮಂಡ್ಯ, ಚಾಮರಾಜನಗರದ ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಮೈಸೂರಿನ ಪಶ್ಚಿಮ ಭಾಗ ಹಾಗೂ ಬೆಳಗಾವಿಯ ದಕ್ಷಿಣ, ಹಾವೇರಿಯಲ್ಲಿ ಮಳೆಯಾಗಲಿದೆ.

ಮೇ 14ರಂದು ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿಯ ದಕ್ಷಿಣ, ಕೊಡಗು, ಹಾವೇರಿ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಹಾಸನ, ಸೇರಿ ಹಲವು ಕಡೆ ಮಳೆಯಾಗಲಿದೆ.

Share This Article
Leave a comment