ಜೆಡಿಎಸ್‍ನಲ್ಲಿ ಹಣವಿದ್ದವರಿಗೆ ಟಿಕೆಟ್: ಮರಿತಿಬ್ಬೇಗೌಡ ವಾಗ್ದಾಳಿ

Team Newsnap
1 Min Read

ಜೆಡಿಎಸ್‍ನಲ್ಲಿ ಹಣವಿದ್ದರೇ ಮಾತ್ರ ಚುನಾವಣೆಗೆ ಟಿಕೆಟ್ . ಹಣ ಇಲ್ಲ ಅಂದ್ರೆ ಟಿಕೆಟ್ ಸಿಗೋಲ್ಲಾ ಎಂದು ಜೆಡಿಎಸ್‍ನ ಎಂಎಲ್‍ಸಿ ಮರಿತಿಬ್ಬೇಗೌಡ ದೇವೇಗೌಡ , ಕುಮಾರಸ್ವಾಮಿ ವಿರುದ್ದ ಗಂಭೀರ ಆರೋಪ ಮಾಡಿದರು.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತಾನಾಡಿದ ಮರಿತಿಬ್ಬೇಗೌಡ ಜೆಡಿಎಸ್ ಪಕ್ಷದ ಮೇಲೆ ಹಾಗೂ ನಾಯಕರ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಆರೋಪ ಮಾಡಿ ವಾಗ್ದಾಳಿ ಮಾಡುತ್ತಿತ್ತು. ಆದರೆ ಇದೀಗ ನಾವೇ ಜೆಡಿಎಸ್ ಸ್ವಪಕ್ಷದ ನಾಯಕರ ಮೇಲೆ ಗಂಭೀರ ಆರೋಪ ಮಾಡುವಂತಾಗಿದೆ ಎಂದರು.

ದಕ್ಷಿಣ ಪದವೀಧರ ಕ್ಷೇತ್ರದಿಂದ ತಮ್ಮ ಆಪ್ತ ಕೀಲಾರ ಜಯರಾಂ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಗೆ ಟಿಕೆಟ್ ಕೇಳಿದಕ್ಕೆ ಆತನ ಬಳಿ ಹಣ ಇಲ್ಲ. ಅವನಿಗೆ ಟಿಕೆಟ್ ಬೇಡಾ ಎಂದು ಜೆಡಿಎಸ್ ವರಿಷ್ಠರು ಹೇಳಿದ್ದರು.

ಇದಾದ ಬಳಿಕ ಪಕ್ಷದ ಬಾವುಟವನ್ನೇ ಹಿಡಿಯದ ಹೆಚ್.ಕೆ.ರಾಮುಗೆ ಟಿಕೆಟ್ ನೀಡಿದ್ದಾರೆ. ಈ ಮೂಲಕ ಜೆಡಿಎಸ್‍ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಕೊಡುವುದು ತಿಳಿಯುತ್ತದೆ. ಜೆಡಿಎಸ್‍ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ, ಇಲ್ಲಿ ಹಣ ಇದ್ದವರಿಗೆ ಬೆಲೆ ಎಂದು ವಾಗ್ದಾಳಿ ನಡೆಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ನಿಖಿಲ್ ಕುಮಾರಸ್ವಾಮಿ ಸೋಲಲು ಶಾಸಕರು, ಕಾರ್ಯಕರ್ತರು, ಜನರು ಕಾರಣರಲ್ಲ, ಇದಕ್ಕೆ ಅವರ ಕುಟುಂಬದಲ್ಲಿ ತೆಗೆದುಕೊಂಡ ನಿರ್ಣಯಗಳೇ ಕಾರಣ. ಕುಟುಂಬ ರಾಜಕೀಯದಿಂದಲೇ ಈ ಸೋಲು ಉಂಟಾಗಿದೆ. ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿದ ಮೇಲೆ ದೇವೇಗೌಡರು ಚುನಾವಣೆಗೆ ನಿಲ್ಲುವ ಅವಶ್ಯಕತೆ ಇರಲಿಲ್ಲ. ನಿಖಿಲ್ ಮಂಡ್ಯಗೆ ಬೇಡಾ ಎಂದು ನಾನು ಒತ್ತಿ ಹೇಳಿದೆ. ಹೀಗಿದ್ದರೂ, ನನ್ನ ಮಾತನ್ನು ಕೇಳದೆ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದರಿಂದ ಸೋತರು. ಈ ಸೋಲಿಗೆ ಯಾರು ಕಾರಣರಲ್ಲ ಸ್ವತಃ ದೇವೇಗೌಡರ ಕುಟುಂಬವೇ ಇದಕ್ಕೆ ಮೂಲ ಕಾರಣ ಎಂದು ಕಿಡಿಕಾರಿದರು.

Share This Article
Leave a comment