MLC ಚುನಾವಣೆ: ಜೆಡಿಎಸ್ ನಿಂದ ಭವಾನಿ ರೇವಣ್ಣ, ಪುತ್ರ ಸೂರಜ್ ನಡುವೆ ಪೈಪೋಟಿ

Team Newsnap
1 Min Read

ಜೆಡಿಎಸ್ ತವರು ನೆಲ ಹಾಸನ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಹಾಗೂ ಯುವ ನಾಯಕ ಸೂರಜ್ ರೇವಣ್ಣ ಹೆಸರು
ಮುಂಚೂಣಿಯಲ್ಲಿವೆ. ಈಗ ಈ ಎರಡು ಹೆಸರಿನಲ್ಲಿಯೇ ಪೈಪೋಟಿ ನಡೆದಿದೆ

ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಬಹುತೇಕರು ಭವಾನಿ ರೇವಣ್ಣ ಅವರಿಗೆ ಜೈ ಅಂದಿದ್ದಾರಂತೆ

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಾತ್ರ ದೇವೇಗೌಡರು ಯಾರನ್ನೇ ಸ್ಪಧೆ೯ಗೆ ಇಳಿಸಿದರೂ ನನ್ನ ಸಹಮತ ಎಂದರು.

ಬೇಲೂರು ಶಾಸಕ ಲಿಂಗೇಶ್, ಸೇರಿದಂತೆ ಬಹುತೇಕ ಜೆಡಿಎಸ್ ಶಾಸಕರು, ಕಾರ್ಯಕರ್ತರು ಭವಾನಿ ರೇವಣ್ಣ ಸ್ಪರ್ಧೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಈ ಬಾರಿ ವಿಧಾನ ಪರಿಷತ್ ಕಣಕ್ಕೆ ಇಳಿಸುತ್ತಾರೆ ಎನ್ನುವ ಗುಸು ಗುಸು ಹೆಚ್ಚಾಗಿದೆ

ಸೂರಜ್ ಹೇಳುವುದು ಏನು ?

ಇನ್ನೂ ಈ ಬಗ್ಗೆ ಡಾ ಸೂರಜ್ ಪ್ರತಿಕ್ರಿಯೆ ನೀಡಿ ನನಗಿಂತ ನನ್ನ ತಾಯಿ ಭವಾನಿ ರೇವಣ್ಣ ಅವರೇ ಅಭ್ಯರ್ಥಿ ಆಗಲಿ ಎಂಬ ಕೂಗು 80% ಹೆಚ್ಚಿದೆ. ಹೀಗಾಗಿ ಯಾರೇ ಸ್ಪರ್ಧೆ ಮಾಡಿದ್ರು ಸರಿ ಎಂದು ತನ್ನ ತಾಯಿಯ ಕಡೆ ಬೆರಳು ತೋರಿದ್ದಾರೆ ಎನ್ನಲಾಗಿದೆ.

Share This Article
Leave a comment