November 2, 2024

Newsnap Kannada

The World at your finger tips!

WhatsApp Image 2023 06 26 at 5.16.03 PM

ಪುತ್ರ ಯತೀಂದ್ರನಿಗೆ ಎಂಎಲ್ಸಿ ಪಟ್ಟಾಭಿಷೇಕ : ಸಿದ್ದು ತಾಲೀಮು ಆರಂಭ

Spread the love
  • ಡಾ.ಯತೀಂದ್ರ ನಿಂದ ಅಪ್ಪನಿಗಾಗಿ ವರುಣಾ ಕ್ಷೇತ್ರ ತ್ಯಾಗ
  • ಅಪ್ಪನ ಗೆಲುವಿನ ಹಿಂದಿದೆ ಯತೀಂದ್ರ ಪರಿಶ್ರಮ
  • ಸುತಾರಾಂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ

ಮೈಸೂರು : ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತಂದೆಗಾಗಿ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಡಾ.ಯತೀಂದ್ರ ರಾಜ್ಯ ರಾಜಕಾರಣದಲ್ಲಿ ಸುತ್ತು ಹೊಡೆಯಲು ತಂತ್ರ ರೂಪಿಸಿದ್ದಾರೆ.

ಸಿಎಂ ಸಿದ್ದು ಕೂಡ ಪುತ್ರನನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ರಾಜ್ಯ ರಾಜಕಾರಣದಲ್ಲಿ ನೆಲೆಯೂರುವಂತೆ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರಂತೆ.

ಅಪ್ಪನಿಗಾಗಿ ಮಗ ಡಾ. ಯತೀಂದ್ರ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ ಬೆನ್ನಲ್ಲೇ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೊಡಗು-ಮೈಸೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದವು
ಆದರೆ ಯತೀಂದ್ರ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಅವರನ್ನು ಎಂಎಲ್​ಸಿ ಮಾಡಲು ಬಯಸಿರುವ ಸಿಎಂ ದೆಹಲಿ ರಾಜಕೀಯ ಬೇಡ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ ಎನ್ನಲಾಗಿದೆ.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಗೆಲುವಿನ ಹಿಂದೆ ಯತೀಂದ್ರ ಪಾತ್ರ ಪ್ರಮುಖವಾಗಿದೆ.

ಸಿದ್ದರಾಮಯ್ಯರ ಅನುಪಸ್ಥಿತಿಯಲ್ಲೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ ಅನುಭವ ಇದೆ. ಈಗ ಶಾಸಕರಾಗದ ಕಾರಣ ಪಕ್ಷದಲ್ಲಿ ಕಾಣಿಸಿಕೊಳ್ಳಲಾಗದ ಪರಿಸ್ಥಿತಿ ಎದುರಾಗಿದೆ. ಕ್ಷೇತ್ರದಲ್ಲಿ ಅಥವಾ ಪಕ್ಷದಲ್ಲಿ ಗುರುತಿಸಿಕೊಂಡರೆ ಸಿಎಂ ಮಗ, ಅದಕ್ಕೆ ಓಡಾಡ್ತಿದ್ದಾರೆ ಎಂಬ ಮಾತುಗಳು ಕೇಳಿಬರಬಹುದು. UPSC ನೇಮಕಾತಿ 2023 : 261 ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ರೀತಿಯ ಮಾತುಗಳು ಕೇಳಿಬರೋದು ಬೇಡ ಎಂದೇ, ಪರಿಷತ್ ಸದಸ್ಯರನ್ನಾಗಿ ಮಾಡುವ ಲೆಕ್ಕಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರ ಬೇಡಿಕೆಗೆ ಅಸ್ತು ಅಂದರೆ, ಯತೀಂದ್ರಗೆ ಪರಿಷತ್ ಸ್ಥಾನ ಸಿಗುವುದು ಗ್ಯಾರೆಂಟಿ.

Copyright © All rights reserved Newsnap | Newsever by AF themes.
error: Content is protected !!