ಹಳ್ಳಿಹಕ್ಕಿ ಎಚ್ ವಿಶ್ವನಾಥ್ ಸಾಕಷ್ಟು ಹಣ ಪಡೆದು ಬಿಜೆಪಿಗೆ ಸೇರಿದ್ದಾರೆಂದು ಆರೋಪಿಸಿ, ಆ ದಿನ ಆಣೆ ಮಾಡಲು ಸಾದ್ಯವಾಗದ ಹಿನ್ನೆಲೆಯಲ್ಲಿ ಕೆ ಆರ್ ನಗರದ ಶಾಸಕ ಸಾ ರಾ ಮಹೇಶ್ ಇಂದು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ತಪ್ಪು ಕಾಣಿಕೆ ಸಲ್ಲಿಸಿದರು.
ಮಂಗಳವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದು , ವಿಶೇಷ ಪೂಜೆ ಸಲ್ಲಿಸಿದರು.
ವಿಧಾನ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬಿಜೆಪಿಯಿಂದ ಹಣ ಪಡೆದು ಪಕ್ಷಾಂತರ ಮಾಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಚಾಮುಂಡೇಶ್ವರಿ ತಾಯಿ ಎದುರು ಆಣೆ ಮಾಡಲು ಸಿದ್ದ ಎಂದು ಘೋಷಣೆ ಮಾಡಿದ್ದ ಸಾ ರಾ ಮಹೇಶ್ ಆಣೆ ಪ್ರಮಾಣದ ದಿನ ನಿಗದಿತ ಸಮಯಕ್ಕೆ ದೇವಸ್ಥಾನ ಕ್ಕೆ ಬಂದಿದ್ದರು.
ಅಲ್ಲದೇ ಅಂದು ವಿಶ್ವನಾಥ್ ಬರುವಿಕೆಗಾಗಿ ದೇವಸ್ಥಾನದ ಒಳ ಆವರಣದಲ್ಲೇ ಕಾದು ಕುಳಿತರು. ತುಂಬಾ ಹೊತ್ತು ಕಾದರೂ ವಿಶ್ವನಾಥ್ ಬರಲೇ ಇಲ್ಲ. ಕೊನೆಗೆ ಆಣೆ ಮಾಡಲು ಸಾಧ್ಯವಾಗಲಿಲ್ಲ.
ಈ ಕಾರಣಕ್ಕಾಗಿ ಇಂದು ತಪ್ಪು ಕಾಣಿಕೆ ಸಲ್ಲಿಸಲು ದೇವಸ್ಥಾನಕ್ಕೆ ಆಗಮಿಸಿದ್ದರು.
ಆಣೆ ಪ್ರಮಾಣದ ತಪ್ಪ ಹರಕೆ ತೀರಿಸಲು ಬಂದಿದ್ದೇನೆ ಎಂದು ಹೇಳಿ ದೇವಿಗೆ ಕಾಣಕೆ ಸಲ್ಲಿಸಿರುವುದಾಗಿ ಹೇಳಿದರು.
ಹಳ್ಳಿಹಕ್ಕಿ ಗೆ ತಟ್ಟಿದ ಶಾಪ?
ಆಣೆ ಪ್ರಮಾಣಕ್ಕೆ ಬೆಲೆ ಕೊಡದ ಹಿನ್ನಲೆಯಲ್ಲಿ ಎಚ್. ವಿಶ್ವನಾಥ್ ಗೆ ಮಂತ್ರಿಗಿರಿ ತಪ್ಪಲು ಈ ಪ್ರಕರಣ ಕಾರಣವಾಯಿತೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ
- KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
- BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
- ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ
- ಭೂಕಂಪದ : ಟಿಬೆಟ್-ನೇಪಾಳ ಗಡಿಯಲ್ಲಿ 32 ಮಂದಿ ಸಾವು, 38 ಮಂದಿ ಗಾಯ
- ಭಾರತೀಯ ವಾಯುಪಡೆ: ಏರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ