December 22, 2024

Newsnap Kannada

The World at your finger tips!

WhatsApp Image 2022 11 03 at 4.53.28 PM

ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ : ನಾಲೆಯಲ್ಲಿ ಕಾರಿನ ಬಿಡಿ ಭಾಗಗಳು ಪತ್ತೆ – ಹೆಚ್ಚಿದ ಅತಂಕ

Spread the love

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಹೆಚ್.ಕಡದಕಟ್ಟೆ ಮಧ್ಯದಲ್ಲಿರುವ ಚಾನಲ್​ಗೆ ನಿರ್ಮಿಸಿರುವ ಬ್ರಿಡ್ಜ್​​ ಬಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮ ಪುತ್ರ ಚಂದ್ರು ಕಾರಿನ ಅವಶೇಷಗಳು ಪತ್ತೆಯಾಗಿವೆ.

ಕಳೆದ 5 ದಿನಗಳಿಂದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯಸೋದರನ ಮಗ ಚಂದ್ರಶೇಖರ್ ನಾಪತ್ತೆ ಆಗಿದ್ದಾರೆ. ಚಂದ್ರಶೇಖರ್​ಗಾಗಿ ನಿರಂತರವಾಗಿ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಸಿಕ್ಕಿರುವ ಕಾರಿನ ಅವಶೇಷಗಳು ಶಂಕೆಯನ್ನು ಹುಟ್ಟುಹಾಕಿವೆ. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ಧ್ಯಾನ: ಸಚಿವ ನಾಗೇಶ್ ಪತ್ರ

ಸಿಕ್ಕಿರುವ ಕಾರಿನ ಬಿಡಿಭಾಗಗಳು ಚಂದ್ರಶೇಖರ್ ಬಳಸಿದ್ದ ಕಾರಿನದ್ದೇ ಎಂಬ ಪ್ರಶ್ನೆ ಕೂಡ ಕಾಡಿದೆ. ಜೊತೆಗೆ ಮನೆ ಮಗ ನಾಪತ್ತೆಯಾಗಿರುವ ಭಯದಲ್ಲಿರುವ ರೇಣುಕಾಚಾರ್ಯ ಕುಟುಂಬಕ್ಕೆ ಮತ್ತಷ್ಟು ಆತಂಕ ಉಂಟಾಗಿದೆ. ಈ ವಿಷಯ ತಿಳಿದು ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಥಳಕ್ಕೆ ಕಣ್ಣೀರಿಡುತ್ತ ದೌಡಾಯಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!