ಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಶಾಸಕ ಮಂಜುನಾಥ್ ಪರಿಹಾರದ ಚೆಕ್ ವಿತರಣೆ

Team Newsnap
1 Min Read

ಹನೂರು : ಎರಡು ದಿನದ ಹಿಂದೆ ಮಹದೇಶ್ವರ ವನ್ಯಜೀವಿ ದಟ್ಟಣೆ ಪ್ರದೇಶದ ತೋಕೆರೆ ಗ್ರಾಮದಲ್ಲಿ ಮಾರ್ಟಳ್ಳಿಗ್ರಾಮದ ಚಿಕ್ಕಮಾದಯ್ಯ ಆನೆ ತುಳಿತಕ್ಕೆ ಒಳಗಾಗಿ ಸಾವನಪ್ಪಿದ್ದ ಮೃತರ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಶಾಸಕ ಎಂ ಆರ್ ಮಂಜುನಾಥ್‌ ಅವರು ಮೃತ ಪಟ್ಟ ವ್ಯಕ್ತಿ ಚಿಕ್ಕಮಾದಯ್ಯ ರವರ ಮಾರ್ಟಳ್ಳಿ ಗ್ರಾಮದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ.5 ಲಕ್ಷ ರೂಪಾಯಿ ಪರಿಹಾರ ನೀಡಿ, ವೈಯಕ್ತಿಕವಾಗಿಯು ಸಹ ಆರ್ಥಿಕವಾಗಿ ಸಹಾಯ ಮಾಡಿದರು.

ಶಾಸಕರು ಅರಣ್ಯ ಸಚಿವರಿಗೆ ದೂರವಾಣಿ ಮೂಲಕ ಕರೆ ಮಾಡಿ ಇಲ್ಲಿನ ಜನರ ತೊಂದರೆ ಬಗ್ಗೆ ವಿವರ ಮಾಹಿತಿ ತಿಳಿಸಿದರು. ನಾಳೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಇಲ್ಲ -ಸಂಸದ ಪ್ರತಾಪ್ ಸಿಂಹ

ಅಧಿಕಾರಿಗಳ ಜೊತೆಯಲ್ಲಿಯು ಸಹ ಮಾತನಾಡಿದ್ದೇನೆ. ಜನರಿಗೆ ವನ್ಯ ಪ್ರಾಣಿಗಳಿಂದ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿ ಎಂದರು ಈ ಸಂದರ್ಭದಲ್ಲಿ ವಲಯ ಅರಣ್ಯಧಿಕಾರಿ ಸುಂದರ್ ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ :- ನಾಗೇಂದ್ರ ಪ್ರಸಾದ್

Share This Article
Leave a comment