ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆ ಮೇಲೆಯೇ ಶಾಸಕ ಅರವಿಂದ ಲಿಂಬಾವಳಿ ಅವಾಜ್ ಹಾಕಿ, ದರ್ಪ ತೋರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಾಸಕರು ಗುರುವಾರ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಲು ತೆರಳಿದ ಮೇಲೆ ಘಟನೆ ನಡೆದಿದೆ. ಅಧಿಕಾರಿಗಳ ಜೊತೆ ಮಳೆ ಹಾನಿ ಪ್ರದೇಶ ವೀಕ್ಷಣೆಗೆ ತೆರಳಿದ್ದ ಶಾಸಕ ಅರವಿಂದ್ ಲಿಂಬಾವಳಿಯಿಂದ ಅಮಾಯಕ ಮಹಿಳೆ ಮೇಲೆ ದರ್ಪ ಮೇರೆದಿದ್ದಾರೆ.
ಮಳೆಯಿಂದ ವರ್ತೂರು ಕೆರೆ ಕೋಡಿ ಬಿದ್ದ ಪರಿಣಾಮ ನೀರು ವಸತಿ ಪ್ರದೇಶಗಳಿಗೆ ನೀರು ನುಗ್ಗಿತ್ತು. ಈ ವೇಳೆ ಹಾನಿಗೊಳಗಾದ ಪ್ರದೇಶ ವೀಕ್ಷಣೆಗೆ ಶಾಸಕ ಲಿಂಬಾವಳಿ ತೆರಳಿದ್ದರು. ಈ ವೇಳೆ ಶಾಸಕರಿಗೆ ಮನವಿ ಸಲ್ಲಿಸಲು ಮಹಿಳೆ ಮನವಿ ಪತ್ರ ಇಟ್ಟುಕೊಂಡು ಬಂದಿದ್ದರು.
ಮುರುಘಾ ಮಠದ ವಸತಿ ಶಾಲಾ ವಿದ್ಯಾರ್ಥಿನಿಯರು ಬೇರೆಡೆಗೆ ಸ್ಥಳಾಂತರಕ್ಕೆ ಚಿಂತನೆ
ಮಹಿಳೆ ನೋಡುತ್ತಿದಂತೆ ಗರಂ ಆದ ಶಾಸಕರು, ಮಹಿಳೆಯ ಬಳಿ ಮನವಿ ಪತ್ರ ಕಸಿದುಕೊಂಡು ಆವಾಜ್ ಹಾಕಿ ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯನ್ನು ನೋಡಿದ ಕೂಡಲೇ ಗರಂ ಆದ ಶಾಸಕರು, ನಿಂಗೆ ಮಾನ ಮರ್ಯಾದೆ ಇದೀಯಾ? ನಾಚಿಕೆ ಅಗಲ್ವಾ ನಿಂಗೆ? ನಿಂಗೆ ಮರ್ಯಾದೆ ಬೇರೆ ಕೊಡಬೇಕಾ? ಏಯ್ ಆಕೆಯನ್ನು ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿ.. ಏಯ್ ಎತ್ತಿಕೊಂಡು ಹೋಗೋ ಅವಳನ್ನು, ಹೇ ಬಾಯಿ ಮುಚ್ಚು, ಹೇ ಬಾಯಿ ಮುಚ್ಚು.. ಒದ್ದು ಒಳಗೆ ಹಾಕ್ತಿನಿ ಅಂತಾ ಏಕವಚನದಲ್ಲಿ ನಿಂದಿಸಿದ್ದಾರೆ.
ಈ ವೇಳೆ ಮಹಿಳೆ ತಾನು ನ್ಯಾಯ ಕೇಳಲು ಬಂದಿದ್ದೇನೆ, ಮಹಿಳೆ ಇದ್ದೀನಿ. ಗೌರವ ಕೊಟ್ಟು ಮಾತನಾಡಿಸಿ ಎಂದು ಮನವಿ ಮಾಡಿಕೊಂಡರೂ ಕೇಳದೆ ವಶಕ್ಕೆ ಪಡೆದುಕೊಳ್ಳಲು ಶಾಸಕರು ಸೂಚನೆ ನೀಡಿರುವ ವಿಡಿಯೋದಲ್ಲಿಇದೆ.
ಶಾಸಕರು ಸೂಚನೆ ನೀಡುತ್ತಿದ್ದಂತೆ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಗಂಟೆಗಟ್ಟಲೇ ಠಾಣೆಯಲ್ಲೇ ಕೂರಿಸಿ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
- ಸಿಎಂ ಪತ್ನಿಯ ನಿವೇಶನ ಹಗರಣ: ದೂರು ಹಿಂಪಡೆಯಲು ಆಮಿಷ ನೀಡಿದ ಆರೋಪ
More Stories
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ