ಶ್ರೀಲಂಕಾದಿಂದ ಪಲಾಯನಗೈದಿದ್ದ ಮಾಜಿ ಅಧ್ಯಕ್ಷ ರಾಜಪಕ್ಸೆ ತಾಯ್ನಾಡಿಗೆ ವಾಪಸ್

Team Newsnap
1 Min Read

ಜುಲೈನಲ್ಲಿ ನಾಗರಿಕರು ನಡೆಸಿದ ಭಾರೀ ಪ್ರತಿಭಟನೆ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹಿನ್ನೆಲೆ ಶ್ರೀಲಂಕಾದಿಂದ ಪಲಾಯನಗೈದಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಶನಿವಾರ ಬೆಳಿಗ್ಗೆ ತಾಯ್ನಾಡಿಗೆ ಮರಳಿದ್ದಾರೆ.

ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಜನರು ಹಿಂಸಾತ್ಮಕ ಪ್ರತಿಭಟನೆ ನಡೆಸಿ, ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು.

ಜುಲೈ 9 ರಂದು ಪ್ರತಿಭಟನಾಕಾರರು ರಾಜಪಕ್ಸೆ ಅವರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಶ್ರೀಲಂಕಾದಿಂದ ಪಲಾಯನಗೈದಿದ್ದ ರಾಜಪಕ್ಸೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.

ಮುರುಘಾ ಮಠದ ವಸತಿ ಶಾಲಾ ವಿದ್ಯಾರ್ಥಿನಿಯರು ಬೇರೆಡೆಗೆ ಸ್ಥಳಾಂತರಕ್ಕೆ ಚಿಂತನೆ

ಶ್ರೀಲಂಕಾ ತೊರೆದಿದ್ದ ರಾಜಪಕ್ಸೆಗೆ ಸಿಂಗಾಪುರದಲ್ಲಿ 14 ದಿನಗಳ ಭೇಟಿಯ ಪಾಸ್ ನೀಡಲಾಗಿತ್ತು. ಅವರು ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ಹೋಗಿ, ಬಳಿಕ ಥೈಲ್ಯಾಂಡ್‌ಗೆ ತೆರಳಿದ್ದರು. ಈ ಎಲ್ಲಾ ಘಟನೆಗಳು ನಡೆದು ಇದೀಗ 2 ತಿಂಗಳ ಬಳಿಕ ರಾಜಪಕ್ಸೆ ಶ್ರೀಲಂಕಾಗೆ ಮರಳಿದ್ದಾರೆ.

ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡಿದ ಬಳಿಕ ಜುಲೈ 21 ರಂದು ಸಂಸತ್ತಿನಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕರಿಸಿದರು.

Share This Article
Leave a comment