March 29, 2023

Newsnap Kannada

The World at your finger tips!

politics , election , news

MLA is the reason for deterioration of my relationship with DK: Ramesh Jarakiholiನನ್ನ- ಡಿಕೆಶಿ ಸಂಬಂಧ ಹದಗೆಡಲು ಆ ಶಾಸಕಿ ಕಾರಣ : ರಮೇಶ್ ಜಾರಕಿಹೊಳಿ

ನನ್ನ- ಡಿಕೆಶಿ ಸಂಬಂಧ ಹದಗೆಡಲು ಆ ಶಾಸಕಿ ಕಾರಣ : ರಮೇಶ್ ಜಾರಕಿಹೊಳಿ

Spread the love

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವಿನ ಸಂಬಂಧ ಹಾಳಾಗಲು ಆ ಶಾಸಕಿಯೇ ಕಾರಣ. ಮಹಿಳೆಯ ಮೂಲಕ ಡಿ.ಕೆ. ಶಿವಕುಮಾರ್ ತೇಜೋವಧೆ ಮಾಡಿದ್ದಾರೆ. ಇದೊಂದು ವೈಯಕ್ತಿಕ ಯುದ್ಧ. ಡಿಕೆಶಿ ರಾಜಕಾರಣಿಯಾಗಲು ನಾಲಾಯಕ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ಮಾಡಿದರು

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಅವರು, ಸಿಡಿಯಲ್ಲಿರುವ ಹುಡುಗಿಯನ್ನು, ಡಿಕೆಶಿ, ಸೇರಿದಂತೆ ಕನಕಪುರದ ಗ್ರಾನೈಟ್‌ ವ್ಯಾಪಾರಿ ಸೇರಿದಂತರೆ ನನ್ನ ವಿರುದ್ದ ಆರೋಪ ಮಾಡಿರುವ ಮೈಸೂರು ಮೂಲದ ಇಬ್ಬರು ಶಾಸಕರನ್ನು ಬಂಧಿಸಬೇಕು ಅಂತ ಅವರು ಹೇಳಿದರು.

ಇದನ್ನು ಓದಿ –ಮಂಡ್ಯದಲ್ಲಿ ಭದ್ರಾವತಿ ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ

ಇದೇ ವೇಳೆ ಕೇಸ್‌ ಸಂಬಂಧ ಸಿಬಿಐಗೆ ವಹಿಸಬೇಕು ಅಂಥ ತಿಳಿಸಿದರು. ನನ್ನ ಬಳಿ 20 ಸಿಡಿಗಳಿವೆ, ಎಲ್ಲವನ್ನು CBI ಗೆ ನೀಡುವೆ . 1985ರಲ್ಲಿ ಶಿವಕುಮಾರ್‌ ಅವರು ಚಪ್ಪಲಿ ಹಾಕೊಂಡು ಇದ್ದರು. ನಾನು ಆ ವೇಳೇಯಲ್ಲೆಯಲ್ಲಿ ರ್ಯಾಡೋ ವಾಚ್‌ ಮತ್ತು ಟೀ ಶರ್ಟ್‌ ಹಾಕೊಂಡು ಇದ್ದೆ. ಸಿಡಿಗೆ ಸಂಬಂಧಪಟ್ಟಂತೆ ಶ್ರವಣ್‌ ಮತ್ತು ನರೇಶ್‌ ಅವರನ್ನು ಕೂಡಲೇ ಬಂಧಿಸಬೇಕು ಅಂತ ಹೇಳಿದರು. ಇನ್ನೂ ಡಿಕೆಶಿ ಒಬ್ಬ ಜಂಗ್ಲಿ ಮನುಶ್ಯ ಅಂತ ವ್ಯಂಗ್ಯವಾಡಿದರು. ನಾನು ಡಿಕೆಶಿ ಅಣ್ಣ ತಮ್ಮಂದಿರ ಹಾಗೇ ಇದ್ದೇವೆ, ನಮ್ಮಿಬ್ಬರ ಸಂಬಂಧ ಹಳಸಲು ಗ್ರಾಮೀಣ ಶಾಸಕಿ ಕಾರಣ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರನ್ನು ಹೇಳದೇ ಕಿಡಿಕಾರಿದರು.

ನನ್ನ ಹೇಳಿಕೆಯನ್ನು ತಿರುಚಿ ಆಡಿಯೋವೊಂದನ್ನು ವೈರಲ್‌ ಆಗಿದ್ದು, ನಾಳೆ ಏನು ಆದ್ರು ಜಾತಿ ಸಂಘರ್ಶಕ್ಕೆ ಕಾರಣವಾದ್ರೆ ಅದಕ್ಕೆ ಇವರೇ ಕಾರಣ ಅಂತ ತಿಳಿಸಿದರು.

ಶುಗರ್‌ ಕಾರ್ಖನೆಯಲ್ಲಿ ಕೋಟ್ಯಾಂತರ ಅವ್ಯವಾಹರವಾಗಿದ್ದು, ಕಪ್ಪು ಹಣ ಬಿಳಿಯಾಗಿದೆ ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಅಂತ ಹೇಳಿದರು.

ಆಡಿಯೋದಲ್ಲಿ ಇರೋದು ಏನು?

ನನ್ನ ಹತ್ತಿರ ಸಾವಿರಾರು ಕೋಟಿ ಇದೇ, ದುಬೈನಲ್ಲಿ, ಲಂಡನ್‌ನಲ್ಲಿ ಮನೆ ಇದೇ ಅಂತ ಡಿಕೆಶಿ ಹೇಳಿರುವ ಆಡಿಯೋ ನನ್ನ ಬಳಿ ಅಂತ ಹೇಳಿದರು. ಇದೇ ವೇಳೆ ಮಾಧ್ಯಮದವರು ಯಾರ ಬಳಿ ಅವರು ಮಾತನಾಡಿದ್ದಾರೆ ಅಂಥ ಕೇಳಿದ್ದಕ್ಕೆ, ಅವರ ಗರ್ಲ್‌ಫ್ರೆಂಡ್‌ ಬಳಿ ಇರಬಹುದು ಅಂತ ಹೇಳಿದರು.

ಈಗ ಆಡಿಯೋವನ್ನು ನಾನು ರಿಲೀಸ್‌ ಮಾಡುವುದಿಲ್ಲ, ನಾನು ದೆಹಲಿಗೆ ತೆರಳಿ ಸಿಬಿಐ ಡಿಕೆಶಿ ಅಂಡ್‌ ಟೀಮ್‌ ಬಂಧಿಸುವಂತೆ ಹೇಳುವಂತೆ ಅವರು ಹೇಳಿದರು. ಸಿಡಿಯಲ್ಲಿ ಕಾಂಗ್ರೆಸ್‌ ನಾಯಕರು ಸೇರಿದಂತೆ ಹಲವು ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 120 ಮಂದಿಗಳ ಸಿಡಿಗಳನ್ನು ಮಾಡಿಸಿದ್ದಾರೆ ಅಂತ ಅವರು ತಿಳಿಸಿದ್ದಾರೆ.

error: Content is protected !!