ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ – ಸಂಸದ ಪ್ರತಾಪ್ ಸಿಂಹ

prathap shima

ಆಗಸ್ಟ್ 15ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಒನ್ ವೇ ಸಂಚಾರಕ್ಕೆ ಚಾಲನೆ ನೀಡಬೇಕಿತ್ತು. ಆದರೆ ದಶಪಥ ಕಾಮಗಾರಿಯಿಂದಾಗಿ ಬೆಂಗಳೂರು – ಮೈಸೂರು ಹೆದ್ದಾರಿ ಮೊದಲ ಹಂತದ ಕಾಮಗಾರಿ ವಿಳಂಬವಾಗಿದೆ.

ಕೊಟ್ಟ ಮಾತಿಗೆ ತಪ್ಪಿದ್ದೇನೆ. ದಯವಿಟ್ಟು ಕ್ಷಮಿಸಿ ಎಂಬುದಾಗಿ ಸಂಸದ ಪ್ರತಾಪ್ ಸಿಂಹ ಜನತೆಯ ಕ್ಷಮೆಯಾಚಿಸಿದ್ದಾರೆ.

ಈ ಕುರಿತಂತೆ ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿದ್ದಾರೆ ಜುಲೈನಲ್ಲಿ ಬೆಂಗಳೂರು-ನಿಡಘಟ್ಟ ರಸ್ತೆಯನ್ನು ಸಂಚಾರಕ್ಕೆ ತೆರವು ಮಾಡಿಸುತ್ತೇನೆ ಎಂದಿದ್ದೆ, ನಂತರ ಆಗಸ್ಟ್ 15 ರಂದು ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್ ಓಪನ್ ಮಾಡುತ್ತೇವೆ ಎಂದೆ. ಮಾತಿಗೆ ತಪ್ಪಿದ್ದೇನೆ, ದಯವಿಟ್ಟು ಕ್ಷಮಿಸಿ. ಎಲ್ಲಾ ಪ್ರಯತ್ನಗಳ ನಡುವೆಯೂ ಇನ್ನೂ ವಾರ, ಹತ್ತು ದಿನಗಳ ಕೆಲಸ ಬಾಕಿಯಿದೆ. ಗುಡ್ಡ ಕಡಿದು ರಸ್ತೆ ನಿರ್ಮಾಣ ನಡೆಯುತ್ತಿದೆ, ಸ್ವಲ್ಪ ಕಾಲಾವಕಾಶ ನೀಡಿ, ಪ್ಲೀಸ್ ಎಂದಿದ್ದಾರೆ.

ಬೆಂಗಳೂರು ಮೈಸೂರು ಹೆದ್ದಾರಿ ಮೊದಲ ಹಂತದ ಕಾಮಗಾರಿ ಜುಲೈ ವೇಳೆಗೆ ಮುಗಿಯುವ ನಿರೀಕ್ಷೆಯಿತ್ತು. ಆದರೆ ದಶಪಥ ಕಾಮಗಾರಿಯಿಂದಾಗಿ ವಿಳಂಬಗೊಂಡಿತ್ತು. ಇದೇ ಕಾರಣದಿಂದಾಗಿ ಆಗಸ್ಟ್ 15ರ ಇಂದು ಒನ್ ವೇ ಸಂಚಾರಕ್ಕೂ ಅಧಿಕೃತವಾಗಿ ಚಾಲನೆ ನೀಡೋದಕ್ಕೆ ಸಾದ್ಯವಾಗಿರಲಿಲ್ಲ. ಹೀಗಾಗಿಯೇ ಸಂಸದ ಪ್ರತಾಪ್ ಸಿಂಹ ಜನತೆಯಲ್ಲಿ ಕ್ಷಮೆ ಕೋರಿದ್ದಾರೆ.

Leave a comment

Leave a Reply

Your email address will not be published. Required fields are marked *

error: Content is protected !!