ನಾಪತ್ತೆಯಾಗಿದ್ದ ಸಂಸದ ಶವವಾಗಿ ಪತ್ತೆ

Team Newsnap
1 Min Read

ಕೋಲ್ಕತ್ತಾ : ಬಾಂಗ್ಲಾದೇಶದ ಆಡಳಿತಾರೂಢ ಅವಾಮಿ ಲೀಗ್‌ನ ಸಂಸದ ಅನ್ವರುಲ್ ಅಜೀಮ್ ಅನಾರ್ ಮೇ 13 ರಿಂದ ನಾಪತ್ತೆಯಾಗಿದ್ದು ,ಇಂದು ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವೈದ್ಯಕೀಯ ತಪಾಸಣೆಗಾಗಿ ಸಂಸದರು ಮೇ 12ರಂದು ಭಾರತಕ್ಕೆ ಬಂದಿದ್ದು , ಮರುದಿನದಿಂದ ಕಾಣೆಯಾಗಿದ್ದರು. ಈ ಕುರಿತು ಮನೆಯವರು ದೂರು ದಾಖಲಿಸಿದ್ದಾರೆ.

ಪೊಲೀಸರು ಸಂಸದರ ಹುಡುಕಾಟ ನಡೆಸುತ್ತಿದ್ದು , ಇಂದು ಬೆಳಗ್ಗೆ ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಸಂಸದರ ಶವ ಪತ್ತೆಯಾಗಿದೆ.

ನ್ಯೂ ಟೌನ್ ಕಟ್ಟಡದಲ್ಲಿ ಹಲವಾರು ರಕ್ತದ ಕಲೆಗಳು ಕಂಡುಬಂದಿದ್ದು ,ಅನ್ವರುಲ್ ಅಜೀಂನನ್ನು ಅಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಸದರನ್ನು ಹತ್ಯೆಗೈದು ಈ ಪ್ರದೇಶದಲ್ಲಿ ಬಿಸಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ,ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಬಾಂಗ್ಲಾದೇಶದ ಗೃಹ ಸಚಿವ ಅಸಾದುಝಮಾನ್ ಖಾನ್ ಅವರು ಢಾಕಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೋಲ್ಕತ್ತಾದಲ್ಲಿ ಸಂಸದರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.ಆರ್ಟಿಕಲ್ 370 ರದ್ದು ಮಾಡಿದ ಸರ್ಕಾರಕ್ಕೆ ಸುಪ್ರೀಂ ಸಾತ್

ಅನ್ವರುಲ್ ಅಜೀಂ ಹತ್ಯೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಹಂತಕರು ಬಾಂಗ್ಲಾದೇಶೀಯರು ಎಂಬುದಾಗಿ ತಿಳಿದುಬಂದಿದೆ.

Share This Article
Leave a comment