January 6, 2025

Newsnap Kannada

The World at your finger tips!

ಗನ್ ಹಿಡಿದು ಉಕ್ರೇನ್ ದೇಶ ರಕ್ಷಣೆಗೆ ನಿಂತ ಮಿಸ್ ಉಕ್ರೇನ್

Spread the love

ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ರಷ್ಯದ ಅಟ್ಟಹಾಸ 5ನೇ ದಿನವೂ ಮುಂದುವರಿದಿದೆ. ಉಕ್ರೇಮ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್‍ಸ್ಕಿ ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳಿ ಎನ್ನುವ ಕರೆ ನೀಡಿದ ಹಿನ್ನೆಲೆಯಲ್ಲಿ ಮಿಸ್ ಉಕ್ರೇನ್ ದೇಶ ರಕ್ಷಣೆಗೆ ಗನ್ ಹಿಡಿದು ನಿಂತಿದ್ದಾರೆ.

ಮಿಸ್ ಉಕ್ರೇನ್ ಆಗಿರುವ ಅನಾಸ್ತೀನಾ ಲೀನಾ ಅವರು 2015ರಲ್ಲಿ ಮಿಸ್ ಗ್ರ್ಯಾಂಡ್ ಇನ್‍ಟರ್‌ನ್ಯಾಷನಲ್ ಬ್ಯೂಟಿ ಸ್ಪರ್ಧೆಯಲ್ಲಿ ಗೆದ್ದಿದ್ದರು.

ಇದೀಗ ದೇಶ ರಕ್ಷಣೆ ಮಾಡಲು ಉಕ್ರೇನ್ ಸೈನ್ಯವನ್ನು ಸೇರಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು, ಸಮವಸ್ತ್ರವನ್ನು ಧರಿಸಿ ನಿಂತಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲೀನಾ ಅವರು ಸ್ಲಾವಿಟಿಕ್‌ ಯೂನಿವರ್ಸಿಟಿ ಕೀವ್‌ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.

ಉಕ್ರೇನ್ ಮೇಯರ್ ವಿಟಾಲಿ ಕ್ಲಿಟ್ಸ್ಚ್ಕೋ (Vitali Klitschko) ಕೂಡಾ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಹೆಚ್ಚಿನವರು ದೇಶ ಸೇವೆ ಮಾಡಲು ಸಿದ್ಧರಿದ್ದಾರೆ. ಆದರೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಕೇಳುತ್ತಿದ್ದಾರೆ. ಹೆಚ್ಚಿನವರು ಮಿಲಿಟರಿ ಹಿನ್ನೆಲೆಯುಳ್ಳವರಾಗಿದ್ದಾರೆ. ಎಲ್ಲಾ ಮಹಿಳೆಯರು ಹಾಗೂ ಪುರುಷರು ದೇಶ ರಕ್ಷಣೆಗೆ ಗನ್ ಹಿಡಿದು ಸಿದ್ಧರಾಗಬೇಕು ಎಂದು ವಿಟಾಲಿ ಹೇಳಿದ್ದಾರೆ.

ನಟ ರವಿಚಂದ್ರನ್ ಅಮ್ಮ(83) ಇನ್ನಿಲ್ಲ

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕ್ರೇಜಿಸ್ಟಾರ್​ ರವಿಚಂದ್ರನ್​ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ (83) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಪಟ್ಟಮ್ಮಾಳ್ ವೀರಸ್ವಾಮಿ ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹಲವು ವರ್ಷಗಳಿಂದ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಕೆಲವು ದಿನಗಳಿಂದ ನಗರದ ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಾಲ್ಕೈದು ವರ್ಷಗಳಿಂದ ಯಾರ ಜೊತೆಯೂ ಮಾತನಾಡದ ಅವರು, ಕೇವಲ ರವಿಚಂದ್ರನ್ ಧ್ವನಿಯನ್ನು ಮಾತ್ರ ಕಂಡು ಹಿಡಿಯುತ್ತಿದ್ದರು.

ನನ್ನಮ್ಮ ನನ್ನ ಗೆಲುವನ್ನು ಮತ್ತೊಮ್ಮೆ ನೋಡಿಯೇ ನಮ್ಮನ್ನು ಅಗಲುತ್ತಾರೆ ಎಂದು ರವಿಚಂದ್ರನ್​ ಹೇಳುತ್ತಿದ್ದರು.

ಈಗ ತಾಯಿಯ ಅಗಲಿಕೆ ರವಿಚಂದ್ರನ್​ ಹಾಗೂ ಕುಟುಂಬದವರನ್ನು ನೋವಿನ ಮಡುವಿಗೆ ನೂಕಿದೆ.

Copyright © All rights reserved Newsnap | Newsever by AF themes.
error: Content is protected !!