ಗಡಿಯಲ್ಲಿ ಉಕ್ರೇನ್ ಸೈನಿಕರಿಂದ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ

Team Newsnap
1 Min Read

ಉಕ್ರೇನ್​​​ನಲ್ಲಿ ರಷ್ಯಾ ಪಡೆಗಳು ಉಕ್ರೇನ್​​​ನ ಒಂದೊಂದೇ ನಗರಗಳನ್ನು ವಶಕ್ಕೆ ಪಡೆದುಕೊಳ್ತಿವೆ. ಭೀಕರ ಯುದ್ಧದಿಂದ ಉಕ್ರೇನ್​​​​ನಲ್ಲಿ ಸಿಲುಕಿಹಾಕಿಕೊಂಡಿರುವ ಭಾರತೀಯರ ಏರ್​​ಲಿಫ್ಟ್​​ಗೆ ಭಾರತ ಹರಸಾಹಸಪಡ್ತಿದೆ. ಇಷ್ಟೆಲ್ಲಾ ಆದ್ರೂ ಉಕ್ರೇನ್‌ನಲ್ಲಿರುವ ಭಾರತೀಯರು ನಿತ್ಯ ನರಕ ಅನುಭವಿಸ್ತಿದ್ದಾರೆ.

ಪೋಲೆಂಡ್​ ಗಡಿಯಲ್ಲಿ ಉಕ್ರೇನ್ ಸೈನಿಕರು ಭಾರತೀಯರ ಮೇಲೆ ಹಲ್ಲೆ ಮಾಡಲು ಮುಂದಾಗಿವೆ

ಉಕ್ರೇನ್ ನಿಂದ ಭಾರತೀಯರನ್ನು ಕರೆತರಲು ಪೋಲೆಂಡ್, ರೊಮೇನಿಯಾ ಮಾರ್ಗವಾಗಿ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಇನ್ನು ಪೋಲೆಡ್ ದೇಶ ಕೂಡಾ ಯಾವುದೇ ವೀಸಾ ಕೇಳದೇ ಭಾರತೀಯರನ್ನು ಏರ್‌ಲಿಫ್ಟ್ ಮಾಡಲು ಮುಂದಾಗಿದೆ.

ಉಕ್ರೇನ್‌ ತೊರೆಯಲು ಸಾವಿರಾರು ಜನ ಹವಣಿಸುತ್ತಿರೋದು ಭಾರತೀಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅದೇನಂದ್ರೆ ಉಕ್ರೇನ್‌ನಿಂದ ಪೋಲೆಂಡ್‌ಗೆ ತೆರಳುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಗಡಿಯಲ್ಲೇ ತಡೆಯಲಾಗಿದೆ.

ರೊಮೇನಿಯಾ ಗಡಿಯಲ್ಲಿ ಭಾರತೀಯರ ಪರದಾಟ
ಉಕ್ರೇನ್-ರೊಮೇನಿಯಾ ಗಡಿಯಲ್ಲಿ ಭಾರತೀಯರು ತಿನ್ನಲು ಆಹಾರ, ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ -5 ಡಿಗ್ರಿ ಚಳಿಯಲ್ಲಿ ಗಡಿಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇತ್ತ ಉಕ್ರೇನ್‌ನಲ್ಲಿ ಇರೋಕು ಆಗದೇ, ಅತ್ತ ರೊಮೇನಿಯಾವನ್ನು ಪ್ರವೇಶಿಸಲು ಆಗದೇ ಕಂಗಾಲಾಗಿ ಹೋಗಿದ್ದಾರೆ.
ಬಂಕರ್‌ಗಳಲ್ಲಿ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರು ಕಾರ್ಖೀವ್ ನಗರದ ಮೆಟ್ರೋ ನಿಲ್ದಾಣದ ಬಂಕರ್‌ಗಳಲ್ಲಿ ಆಶ್ರಯ ಪಡೆದಿರುವ ಕರ್ನಾಟಕದ 250ಕ್ಕೂ ‌ಅಧಿಕ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸ್ತಿದ್ದಾರೆ. ಕಳೆದ ಮೂರು ದಿನಗಳಿಂದ‌ ಆಹಾರ, ಕುಡಿಯುವ ನೀರು ಶುದ್ಧ ಗಾಳಿ ದೊರೆಯದೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ವಿದ್ಯಾರ್ಥಿನಿಯರಿಗೆ ತೀವ್ರ ಆರೋಗ್ಯ ಸಮಸ್ಯೆಗಳು ಎದುರಿಸುತ್ತಿದ್ದಾರೆ.

Share This Article
Leave a comment