ವಸತಿ ಮಹಾಮಂಡಳಿ ವಾರ್ಷಿಕ ಸಭೆ ಬೆಂಗಳೂರಲ್ಲಿ ನಡೆಸಲು ಸಚಿವರ ಮನವಿ

Team Newsnap
1 Min Read

ರಾಷ್ಟಿçÃಯ ಸಹಕಾರಿ ವಸತಿ ಮಹಾಮಂಡಳಿಯ ಮುಂದಿನ ವಾರ್ಷಿಕ ಸಭೆಯನ್ನು ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಸುವಂತೆ ರಾಜ್ಯದ ಸಹಕಾರ ಸಚಿವ, ರಾಷ್ಟ್ರೀಯ ಸಹಕಾರಿ ವಸತಿ ಮಹಾ ಮಂಡಳಿ ನಿರ್ದೇಶಕರಾದ ಎಸ್.ಟಿ.ಸೋಮಶೇಖರ್, ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಗೆ ಮನವಿ ಮಾಡಿದ್ದಾರೆ.


ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಅಧ್ಯಕ್ಷ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನವದೆಹಲಿಯಲ್ಲಿ ಭಾನುವಾರ ನಡೆದ ಮಹಾಮಂಡಳಿಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.


ಮಹಾರಾಷ್ಟ್ರ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ, ಹರಿಯಾಣ ಸೇರಿದಂತೆ 15 ಕ್ಕೂ ಹೆಚ್ಚು ರಾಜ್ಯಗಳ ನಿರ್ದೇಶಕರು ಭಾಗವಹಿಸಿದ್ದರು. ರಾಷ್ಟ್ರೀಯ ವಸತಿ ನೀತಿ ಜಾರಿಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಎಲ್ಲ ರಾಜ್ಯಗಳ ಸಹಕಾರಿ ವಸತಿ ಮಹಾಮಂಡಳಿಗಳನ್ನು ಬಲಪಡಿಸಲು ಕೆಲವು ಮುಖ್ಯ ತಿದ್ದುಪಡಿ ತರಲು ಚರ್ಚೆ ನಡೆಯಿತು.


ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನಿವೇಶನ ದೊರಕಿಸಿ ಕೊಡುವ ಬಗ್ಗೆ ಕೆಲವು ಅಡ್ಡಿ, ಆತಂಕಗಳಿವೆ. ಭೂಸ್ವಾಧೀನಕ್ಕೆ ಸಂಬಂಧಪಟ್ಟ ಕೆಲ ಅಡಚಣೆಗಳಿವೆ. ಇವುಗಳನ್ನು ಪರಿಹರಿಸಲು ಕೇಂದ್ರ ಗೃಹಸಚಿವರಾದ ಸಹಕಾರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಭೆ ನಿರ್ಧರಿಸಿತು.

Share This Article
Leave a comment