December 23, 2024

Newsnap Kannada

The World at your finger tips!

teeth ribben

ಸಚಿವರು ಹಲ್ಲಿನಿಂದಲೇ ಟೇಪ್ ಕತ್ತರಿಸಿ ಶೋ ರೂಂ ಉದ್ಘಾಟನೆ !

Spread the love

ಪಾಕಿಸ್ತಾನದ ಸಚಿವರೊಬ್ಬರು ಉದ್ಘಾಟನಾ ಸಮಾರಂಭದಲ್ಲಿ ತಕ್ಷಣಕ್ಕೆ ಕತ್ತರಿ ಸಿಗಲಿಲ್ಲ. ಕೊನೆಗೆ ಬಾಯಿಯಿಂದಲೇ ಟೇಪ್ ಕತ್ತರಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವ ಫಯಾಜ್ ಅಲ್ ಹಸನ್ ಚೌಹಾಣ್ ಅವರು ಶೋ ರೂಮ್ ಉದ್ಘಾಟನೆಗಾಗಿ ಸಮಾರಂಭಕ್ಕೆ ಆಗಮಿಸಿದ್ದರು.

ಸಚಿವರು ಈ ಉದ್ಘಾಟನೆ ವೇಳೆ ಎಷ್ಟು ಪ್ರಯತ್ನಿಸಿದರೂ ಕತ್ತರಿಯಿಂದ ಕತ್ತರಿಸಲಾಗದ ರಿಬ್ಬನ್‍ಅನ್ನು ತಮ್ಮ ಬಾಯಿಯಿಂದಲೇ ಕಟ್ ಮಾಡಿದ್ದಾರೆ.

ಸಚಿವ ಫಯಾಜ್ ಉಲ್ ಹಸನ್ ಚೌಹಾಣ್ ಉದ್ಘಾಟನೆ ವೇಳೆ ಕತ್ತರಿಯನ್ನು ಹಿಡಿದಿದ್ದಾರೆ. ರಿಬ್ಬನ್ ಕತ್ತರಿಸಲು ಮುಂದಾಗುತ್ತಾರೆ. ಆದರೆ ಎಷ್ಟು ಪ್ರಯತ್ನಿಸಿದರೂ ಸಹ ಆ ಕತ್ತರಿಯಿಂದ ರಿಬ್ಬನ್ ಕಟ್ ಆಗಲಿಲ್ಲ. ತಕ್ಷಣ ತಮ್ಮ ಹಲ್ಲುಗಳಿಂದ ರಿಬ್ಬನ್ ಕತ್ತರಿಸಿದ ವೀಡಿಯೋ ಫುಲ್ ವೈರಲ್ ಆಗಿದೆ.

Copyright © All rights reserved Newsnap | Newsever by AF themes.
error: Content is protected !!