September 26, 2021

Newsnap Kannada

The World at your finger tips!

credits - google picture

ಅಕ್ಟೋಬರ್ 7 ರಂದು ದಸರಾ ಆರಂಭ : ಅಕ್ಟೋಬರ್ 15 ಜಂಬೂ ಸವಾರಿ – ಸಚಿವ ಸೋಮಶೇಖರ್

Spread the love

ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವವು ಅಕ್ಟೋಬರ್ 7 ರಂದು ಆರಂಭವಾಗಿ, ಅಕ್ಟೋಬರ್ 15 ರಂದು ಜಂಬೂಸವಾರಿ ಜರುಗಲಿದೆ.

ದಸರಸ ಆಚರಣೆ 2021 ಸಂಬಂಧ ಬೆಂಗಳೂರಿನ ವಿಧಾನ ಸೌಧದಲ್ಲಿ ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಪೂರ್ವಸಭೆ ಸಭೆಯಲ್ಲಿ ಮೈಸೂರು ದಸರಾ ಆಚರಣೆ ಕುರಿತು ಚರ್ಚೆ ನಡೆಸಲಾಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್​​.ಟಿ ಸೋಮಶೇಖರ್​​​, ರಾಜ್ಯದಲ್ಲಿ ಕೊರೋನಾ ತೀವ್ರವಾಗಿ ಹರಡುತ್ತಿದೆ. ಹೀಗಾಗಿ ಈ ವರ್ಷವೂ ಸರಳವಾಗಿ ದಸರಾ ಆಚರಣೆಗೆ ತೀರ್ಮಾನಿಸಿದ್ದೇವೆ ಎಂದರು.

ಅಕ್ಟೋಬರ್ 7ನೇ ಮೈಸೂರು ದಸರಾ ಉದ್ಘಾಟನೆಯಾಗಲಿದೆ. ಅಕ್ಟೋಬರ್ 15ರಂದು ದಸರಾ ಜಂಬೂ ಸವಾರಿ ಮಾಡಲಿದ್ದೇವೆ. ದಸರಾ ಆಚರಣೆಗೆ ಸರ್ಕಾರದಿಂದ ₹ 6 ಕೋಟಿ ರು ಬಿಡುಗಡೆ ಮಾಡಲಾಗಿದೆ ಎಂದರು.‌

ಮತ್ತೊಮ್ಮೆ ಸಭೆ ನಡೆಸಿ ಗಣ್ಯರ ಆಹ್ವಾನ ಕುರಿತು ಚರ್ಚೆ ನಡೆಸಲಿದ್ದೇವೆ. ದೀಪಾಲಂಕಾರದ ಹೊಣೆ ಇಂಧನ ಸಚಿವರು ಒಪ್ಪಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 9 ದಿನದ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

error: Content is protected !!