ಸಚಿವ ಸಂಪುಟ ಪಟ್ಟಿ ಪ್ರಕಟ : ಪ್ರಾದೇಶಿಕ – ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಸಿಎಂ ಸಿದ್ದು

Team Newsnap
3 Min Read
Ministerial list announced: CM Siddu upheld regional and social justice ಸಚಿವ ಸಂಪುಟ ಪಟ್ಟಿ ಪ್ರಕಟ : ಪ್ರಾದೇಶಿಕ - ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಸಿಎಂ ಸಿದ್ದು
 • ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಡೆಪ್ಯುಟಿ ಸ್ಪೀಕರ್ ನೀಡಿದ ಹೈಕಮಾಂಡ್
 • ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ.

ಬೆಂಗಳೂರು : ಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರುಗಳನ್ನು ಸಚಿವ ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮತೋಲನ ಮೆರೆದಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಒಟ್ಟು ಏಳು ಸಚಿವ ಸ್ಥಾನ ನೀಡಲಾಗಿದೆ ಈ ಸಮುದಾಯದ ಬಹುತೇಕ ಎಲ್ಲಾ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಬಣಜಿಗರಲ್ಲಿ ಈಶ್ವರ್ ಖಂಡ್ರೆ, ಪಂಚಮಸಾಲಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್‌ಕರ್ ಮತ್ತು ಶಿವಾನಂದ ಪಾಟೀಲ್, ಕುರು ಒಕ್ಕಲಿಗರಲ್ಲಿ ಎಂ.ಬಿ.ಪಾಟೀಲ್, ಸಾದ ಲಿಂಗಾಯತರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಆದಿ ಬಣಜಿಗರಲ್ಲಿ ಶರಣ ಪ್ರಕಾಶ ಪಾಟೀಲ್ ರೆಡ್ಡಿಲಿಂಗಾಯತರಲ್ಲಿ ದರ್ಶನಾಪುರ ಮತ್ತು ವೈಷ್ಣವ ರೆಡ್ಡಿಯ ಪ್ರತಿನಿಧಿಯಾಗಿ ಹೆಚ್.ಕೆ.ಪಾಟೀಲ್ ಅವರಿಗೆ ಪ್ರಾತಿನಿಧ್ಯ ದೊರೆತಿದೆ.

ಒಕ್ಕಲಿಗರಲ್ಲಿ ಗಂಗಟಕಾರ್ ಒಕ್ಕಲಿಗರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಚೆಲುವರಾಯಸ್ವಾಮಿ ಅವರುಗಳು ಇದ್ದಾರೆ. ಪಿರಿಯಾಪಟ್ಟಣ ವೆಂಕಟೇಶ್ ಕುಂಚಟಿಗರು, ದಾಸ ಒಕ್ಕಲಿಗರಲ್ಲಿ ಕೃಷ್ಣ ಬೈರೇಗೌಡ ಸೇರಿ ನಾಲ್ಕು ಮಂದಿಗೆ ಪ್ರಾತಿನಿಧ್ಯ ದೊರೆತಿದೆ.

ದಲಿತ ಸಮುದಾಯಕ್ಕೆ ಬರೋಬ್ಬರಿ 9 ಸಚಿವ ಸ್ಥಾನ ಲಭಿಸಿದ್ದು ಮುನಿಯಪ್ಪ, ಜಿ.ಪರಮೇಶ್ವರ್, ಹೆಸ್.ಸಿ.ಮಹದೇವಪ್ಪ, ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರುಗಳು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ. ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸಲಾಗಿದೆ. ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಂದ್ರ, ಮಧುಗಿರಿ ರಾಜಣ್ಣ, ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ.

ವಿಧಾನ ಪರಿಷತ್ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಥೋಡ್ ಕೂಡ ಬಂಜಾರ ಸಮುದಾಯದವರು.

ಹಿಂದುಳಿದ ಜಾತಿಗಳಲ್ಲಿ ಅತ್ಯಂತ ಸಣ್ಣ ಸಮುದಾಯ ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್ ಇದ್ದಾರೆ. ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ. ಬಿಲ್ಲವ ಸಮುದಾಯದಿಂದ ಮಧು ಬಂಗಾರಪ್ಪ ಇದ್ದಾರೆ.

ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಇಬ್ಬರು ಸಚಿವರಾಗಿದ್ದರೆ, ಯು.ಟಿ.ಖಾದರ್ ಸ್ಪೀಕರ್ ಆಗಿದ್ದಾರೆ. ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಜೈನ ಸಮುದಾಯದಿಂದ ಡಿ.ಸುಧಾಕರ್ ಹಾಗೂ ಬ್ರಾಹ್ಮಣ ಸಮುದಾಯದ ಪ್ರತಿನಿಧಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ದೊರಕಿದೆ.

ಹೀಗೆ ಜಾತಿ, ಉಪ ಜಾತಿಗಳನ್ನೂ ವೈಜ್ಞಾನಿಕವಾಗಿ ಪರಿಗಣಿಸಲಾಗಿದೆ.

ಸಚಿವರ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುವಾಗ ಪ್ರಾದೇಶಿಕ ನ್ಯಾಯ ಸಮತೋಲನ ತಪ್ಪದಂತೆಯೂ ಎಚ್ಚರ ವಹಿಸಿರುವುದು ಸಿದ್ದರಾಮಯ್ಯ ಅವರ ಆಯ್ಕೆ ಸಮತೂಕದಲ್ಲಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ.

ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆತಿದೆ. ಮಲೆನಾಡು, ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೆ ಸಿಕ್ಕಿರುವ ಪ್ರಾತಿನಿಧ್ಯ ಜಾತಿವಾರು ಲೆಕ್ಕಾಚಾರಗಳನ್ನೂ ಸರಿದೂಗಿಸಿದೆ.

WhatsApp Image 2023 05 26 at 10.47.19 PM
 • ಶಿವಾನಂದ ಪಾಟೀಲ್ – ಲಿಂಗಾಯತ ( ಬಸವನಬಾಗೇವಾಡಿ)
 • ಎಸ್‍ಎಸ್ ಮಲ್ಲಿಕಾರ್ಜುನ್- ಲಿಂಗಾಯತ (ದಾವಣಗೆರೆ ಉತ್ತರ)
 • ಹೆಚ್.ಕೆ.ಪಾಟೀಲ್ – ರೆಡ್ಡಿ ಲಿಂಗಾಯತ (ಗದಗ),
 • ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ – ಒಕ್ಕಲಿಗ (ಬ್ಯಾಟರಾಯನಪುರ)
 • ಚಲುವರಾಯ ಸ್ವಾಮಿ -ಒಕ್ಕಲಿಗ (ನಾಗಮಂಗಲ)
 • ಕೆ. ವೆಂಕಟೇಶ್- ಒಕ್ಕಲಿಗ (ಪಿರಿಯಾಪಟ್ಟಣ)
 • ಎಚ್.ಸಿ ಮಹದೇವಪ್ಪ – ಎಸ್‍ಸಿ -ಬಲಗೈ (ಟಿ.ನರಸೀಪುರ)
 • ಈಶ್ವರ್ ಖಂಡ್ರೆ – ಲಿಂಗಾಯತ (ಭಾಲ್ಕಿ)
 • ಕೆ.ಎನ್ ರಾಜಣ್ಣ- ಎಸ್‍ಟಿ (ಮಧುಗಿರಿ)
 • ಶರಣ ಬಸಪ್ಪ ದರ್ಶನಾಪೂರ್
 • ಆರ್. ಬಿ ತಿಮ್ಮಾಪೂರ್

ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿಗೆ ಆದೇಶ

 • ಶಿವರಾಜ್ ತಂಗಡಗಿ,
 • ಶರಣ ಪ್ರಕಾಶ್ ಪಾಟೀಲ್- ಲಿಂಗಾಯತ (ಸೇಡಂ)
 • ಮಂಕಾಳ ವೈದ್ಯ – ಮೊಗವೀರ ( ಭಟ್ಕಳ),
 • ಲಕ್ಷ್ಮಿ ಹೆಬ್ಬಾಳ್ಕರ್- ಲಿಂಗಾಯತ (ಬೆಳಗಾವಿ ಗ್ರಾ.)
 • ರಹೀಂ ಖಾನ್ – ಮುಸ್ಲಿಂ (ಬೀದರ್ ಉತ್ತರ)
 • ಎಂ.ಸಿ ಸುಧಾಕರ್ – ಒಕ್ಕಲಿಗ (ಚಿಂತಾಮಣಿ)
 • ಡಿ ಸುಧಾಕರ್
 • ಸಂತೋಷ್ ಲಾಡ್ -ಮರಾಠ (ಕಲಘಟಗಿ)
 • ಬೋಸರಾಜು – ಕ್ಷತ್ರೀಯ (ಮಾಜಿ ಎಂಎಲ್‍ಸಿ)
 • ಬೈರತಿ ಸುರೇಶ್ – ಕುರುಬ (ಹೆಬ್ಬಾಳ)
 • ಮಧು ಬಂಗಾರಪ್ಪ- ಈಡಿಗ (ಸೊರಬ)
 • ಬಿ. ನಾಗೇಂದ್ರ.
Share This Article
Leave a comment