ಸಚಿವ ಬಿ ಸಿ ಪಾಟೀಲ್ ಗೆ ಮನೆಯಲ್ಲಿ ಲಸಿಕೆ ನೀಡಿದ ಟಿಎಚ್ ಓ ಅಮಾನತ್ತು

Team Newsnap
1 Min Read
State Agriculture Minister missing: Congress leaders appeal to search

ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನೆಯಲ್ಲಿಯೇ ಕೊರೊನಾ ಲಸಿಕೆಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ವೈದ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಟಿಎಚ್‍ಒ ಡಾ.ಝಡ್.ಆರ್.ಮಕಾಂದಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಾರ್ಚ್ 2 ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮನೆಯಲ್ಲಿಯೇ ದಂಪತಿಗೆ ವಾಕ್ಸಿನ್ ನೀಡಿದ್ದು ದೊಡ್ಡಮಟ್ಟದ ವಿವಾದವಾಗಿತ್ತು.

ಅಲ್ಲದೆ ಮನೆಯಲ್ಲಿಯೇ ಲಸಿಕೆ ನೀಡಿದ್ದಕ್ಕೆ ಹಾವೇರಿಯ ಡಿಎಚ್‍ಓ ಕಾರಣ ಕೇಳಿ ನೋಟಿಸ್ ನೀಡಿದ್ದರು.

ಕೊರೊನಾ ಲಸಿಕೆ ಹಂಚಿಕೆ ಮಾರ್ಗಸೂಚಿ ಗಳ ಪ್ರಕಾರ ನಿಗದಿಪಡಿಸಿದ ಆಸ್ಪತ್ರೆಗಳಲ್ಲೇ ಲಸಿಕೆಯನ್ನು ನೀಡಬೇಕು. ಆದರೆ ಇಲ್ಲಿ ನಿಯಮ ಉಲ್ಲಂಘನೆ ಆಗಿತ್ತು. ಮಕಾಂದಾರ ಸೂಚನೆಯಂತೆ ಕಿಟ್ ಹೊರಗೆ ತಂದು ಸಚಿವರ ಮನೆಗೆ ತೆರಳಿ ತಾಲೂಕಾಸ್ಪತ್ರೆಯ ಸಿಬ್ಬಂದಿ ಲಸಿಕೆ ಹಾಕಿದ್ದರು.

ಮನೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದನ್ನು ಬಿಸಿ ಪಾಟೀಲ್ ಸಮರ್ಥಿಸಿಕೊಂಡಿದ್ದರು. ದೊಡ್ಡ ವಿಷಯವೇನಲ್ಲ. ಅದರಲ್ಲಿ ತಪ್ಪೇನಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಪ್ರಶ್ನಿಸಿದ್ದರು.

ನಾವೇನು ಅಪರಾಧ ಮಾಡಿದ್ದೇವಾ? ಕಳ್ಳತನ ಮಾಡಿದ್ದೀವಾ.? ನಾನು ಸರ್ಕಾರದ ಒಂದು ಭಾಗ. ನಾನು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮಾದರಿಯಾಗಿದ್ದೇನೆ. ಈ ವಿಷಯ ಎಲ್ಲರಿಗೂ ತಿಳಿಯಿತು. ಇದರಿಂದ ಇನ್ನಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಾರೆ ಎಂದಿದ್ದರು ಎಂಬುದನ್ನು ಸಮರ್ಥಿಸಿದದ್ದರು.

Share This Article
Leave a comment