ಅನಾಥ ಶವಗಳ ಆಸ್ತಿಯನ್ನು ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಿದ ಸಚಿವ ಆರ್. ಅಶೋಕ್

Team Newsnap
1 Min Read

ಕೊರೋನಾಗೆ ಬಲಿಯಾದ ವ್ಯಕ್ತಿಗಳ‌ ಅನಾಥ ಶವಗಳ ಮುಕ್ತಿಗೆ ಕೊಡುವ ಸಂಕಲ್ಪ ಮಾಡಿದ ರಾಜ್ಯ ಸರ್ಕಾರ ಕಾವೇರಿ ನದಿಗೆ ಸಾವಿರಕ್ಕೂ ಹೆಚ್ಚು ಅಸ್ಥಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿರುವ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯ ಸಮೀಪದ ಕಾವೇರಿ ನದಿ ಬಳಿ ಈ ಕಾರ್ಯ ನಡೆಯಿತು.

ಪುರೋಹಿತ ಭಾನು ಪ್ರಕಾಶ್ ಶರ್ಮ ನೇತೃತ್ವದಲ್ಲಿ ಅಂತಿಮ ವಿಧಿವಿಧಾನವು 12ಕ್ಕೂ ಹೆಚ್ಚು ಪುರೋಹಿತರಿಂದ ಕೋವಿಡ್ ಮೃತರಿಗೆ ಶ್ರಾದ್ಧ ಕಾರ್ಯ ನೆರವೇರಿತು.‌

ashoka

ಕರ್ನಾಟಕ ಸರ್ಕಾರದ ಪರವಾಗಿ ಸಂಕಲ್ಪಕ್ಕೆ ಕುಳಿತಿದ್ದ ಸಚಿವ ಆರ್. ಅಶೋಕ್ ನದಿಗೆ ಇಳಿದು ಅಸ್ಥಿ ವಿಸರ್ಜನೆ ಮಾಡಿದ್ದಾರೆ.

ನಂತರ ಮಾತನಾಡಿ ಸಚಿವ ಆರ್ ಅಶೋಕ್, ನನ್ನ ಜೀವನದ ಇದು ಭಾವನಾತ್ಮಕ ಘಳಿಗೆ. ಕಂದಾಯ ಸಚಿವನಾಗಿ ಇಂದು ನಿರ್ವಹಿಸಿದ ಕೆಲಸ ನನ್ನಲ್ಲಿ ಆತ್ಮತೃಪ್ತಿ ತಂದಿದೆ ಎಂದರು.

ಈ ಕಾರ್ಯ ಕೇವಲ ಇಲ್ಲಷ್ಟೇ ಅಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ. ಅವರ ಜಿಲ್ಲೆಯಲ್ಲಿ ಹೀಗೆ ಕುಟುಂಬಸ್ಥರು ತೆಗೆದುಕೊಂಡು ಹೋಗದ ಅಸ್ಥಿಗಳನ್ನು ಗೌರವಪೂರ್ವಕವಾಗಿ ವಿಸರ್ಜನೆ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

Share This Article
Leave a comment