ಮಹಿಷ ದಸರಾ ಆಚರಣೆಗೆ ಸಚಿವ ಮಹದೇವಪ್ಪ ಸುಳಿವು

Team Newsnap
1 Min Read

ಮೈಸೂರು :ಮಹಿಷ ದಸರಾ ಆಚರಣೆ ಬಗ್ಗೆ ಬೇಡಿಕೆ ಬಂದರೆ ಸರ್ಕಾರ ಪರಿಶೀಲನೆ ಮಾಡಲಿದೆ ಎಂದು ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಮಹದೇವಪ್ಪ ಧಾರ್ಮಿಕ ಸ್ವಾತಂತ್ರ್ಯ ಎಂಬುದು ಸಂವಿಧಾನಬದ್ಧ ಹಕ್ಕು .ಯಾರು ಯಾವ ಆಚರಣೆಯನ್ನು ಬೇಕಾದರೂ ಮಾಡಬಹುದು. ಯಾವ ಆಚರಣೆ ಬೇಕು, ಬೇಡ ಅಂತಾ ಸರ್ಕಾರ ತೀರ್ಮಾನ ಮಾಡಲು ಅವಕಾಶ ಇಲ್ಲ ಎಂದರು.

ಮಹಿಷ ದಸರಾಕ್ಕೆ ಅವಕಾಶ ನೀಡುವ ವಿಚಾರ ಇನ್ನೂ ನಮ್ಮ ಮುಂದೆ ಬಂದಿಲ್ಲ. ಮನವಿ ಬಂದರೆ ಪರಿಶೀಲಿಸುತ್ತೇವೆ ಎಂದು ಮೈಸೂರು ಜಿಲ್ಲಾ ಮಂತ್ರಿ ಡಾ ಮಹದೇವಪ್ಪ ಮಹಿಷ ದಸರಾ ನಡೆಯುವ ಬಗ್ಗೆ ಸುಳಿವು ನೀಡಿದರು.

ನಾಡಹಬ್ಬ ದಸರಾಗೆ ಸಿದ್ಧತೆ

ನೂತನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ದಸರಾ ಇದು. ಹಾಗಾಗಿ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ಬಾರಿಯ ನಾಡಹಬ್ಬದ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು. ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

ದಾಖಲೆ ಇದ್ದರೆ ಪ್ರದರ್ಶಿಸಲಿ

ಇನ್ನು ಎಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್‌ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಅನುಭವ ಇರುವವರಾಗಿದ್ದಾರೆ. ಹಾಗಾಗಿ ಅವರು ಗಾಳಿಯಲ್ಲಿ ಗುಂಡು ಹೊಡೆಯಬಾರದು. ನಿಖರ ಮಾಹಿತಿ ಇದ್ದಲ್ಲಿ ಅದನ್ನು ಜನರ ಮುಂದೆ ಪ್ರದರ್ಶಿಸಲಿ. ದಾಖಲೆ, ಸಾಕ್ಷ್ಯ ಇಟ್ಟುಕೊಂಡು ಆರೋಪಿಸಿದರೆ ಅದಕ್ಕೊಂದು ಅರ್ಥವಿರುತ್ತದೆ ಎಂದು ತಿಳಿಸಿದರು.ಇಂದು ಅನ್ನಭಾಗ್ಯ ಯೋಜನೆ ಚಾಲನೆ : ಬಿಪಿಎಲ್ ಕಾರ್ಡ್ ಅಕೌಂಟ್‍ಗೆ ರೇಷನ್ ದುಡ್ಡು .

ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ ಎಲ್ಲ ಗ್ಯಾರಂಟಿಗಳನ್ನೂ ಈಡೇರಿಸಲಾಗುವುದು. ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಿ ಇದಕ್ಕೆ ಅನುದಾನವನ್ನು ಮೀಸಲಿಡಲಾಗಿದೆ. ಇನ್ನು ಯುವ ನಿಧಿಯ ನೋಂದಣಿ ಪ್ರಕ್ರಿಯೆ ಬಗ್ಗೆ ಶೀಘ್ರದಲ್ಲೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Share This Article
Leave a comment