December 22, 2024

Newsnap Kannada

The World at your finger tips!

madhu bangarappa accident

ಕ್ಯಾತ್ಸಂದ್ರ ಬಳಿ ಸಚಿವ ಮಧು ಬಂಗಾರಪ್ಪ ಕಾರು ಅಪಘಾತ – ಪ್ರಾಣಾಪಾಯದಿಂದ ಪಾರು

Spread the love
  • ತುಮಕೂರಿನ ಕ್ಯಾತ್ಸಂದ್ರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ
  • ಶಿವಮೊಗ್ಗದಿಂದ ಬೆಂಗಳೂರು ಕಡೆಗೆ ಪ್ರಯಾಣ
  • ಮಧು ಬಂಗಾರಪ್ಪ ಕಾರುತಡರಾತ್ರಿ ದುರಂತ ಘಟನೆ, ಸ್ವಲ್ಪದರಲ್ಲಿ ತಪ್ಪಿದ ಭಾರೀ ದುರಂತ

ತುಮಕೂರು: ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ಕಳೆದ ಮಧ್ಯರಾತ್ರಿ ತುಮಕೂರಿನ ಕ್ಯಾತ್ಸಂದ್ರ ಬಳಿ ಸಂಭವಿಸಿದೆ .

ಅದೃಷ್ಟವಶಾತ್​ ಸ್ವಲ್ಪದರಲ್ಲಿ ಭಾರೀ ದುರಂತ ತಪ್ಪಿ ಸಚಿವ ಮಧು ಪ್ರಾಣಾಪಾಯದಿಂದ ಪಾರಾಗಿದ್ದಾರೆ .

ಸಚಿವ ಮಧು ಬಂಗಾರಪ್ಪನವರು ಇದ್ದ ಕಾರು ಬೆಂಗಳೂರು ಕಡೆಗೆ ಹೋಗುತ್ತಿತ್ತು. ಈ ವೇಳೆ ಲಾರಿ ಚಾಲಕ ಕಾರನ್ನು ಉಜ್ಜಿಕೊಂಡು ಹೋಗಿದ್ದಾನೆ.

ಇನ್ನು ಅಪಘಾತದಲ್ಲಿ ಕಾರಿನ ಮುಂಭಾಗ ಜಖಂ ಆಗಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.ತಮಿಳು ನಟ ವಿಜಯ್ ಕಾಂತ್ ಕೊರೊನಾಗೆ ಬಲಿ

ಕ್ಯಾತಸಂದ್ರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Copyright © All rights reserved Newsnap | Newsever by AF themes.
error: Content is protected !!