ಮಂಡ್ಯದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಚಿವ ಚಲುವರಾಯಸ್ವಾಮಿ

Team Newsnap
2 Min Read

ಮಂಡ್ಯ : ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಗೃಹ ಜ್ಯೋತಿ ಕಾರ್ಯಕ್ರಮಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಶನಿವಾರ ಚಾಲನೆ ನೀಡಿದರು.

ನಾಗಮಂಗಲದ ಪ್ರಕಾಶ್, ಕುಮಾರ್, ತಜಾಲ್ ಪಾಷ್, ರಹೀಂ ಉನ್ನೀಸ್ ಸೇರಿದಂತೆ ಆಯ್ದ ಫಲಾನುಭವಿಗಳಿಗೆ ವಿದ್ಯುತ್ ಗ್ರಾಹಕರಿಗೆ ಶೂನ್ಯ ಬಿಲ್ ವಿತರಿಸಿದರು.

ನಂತರ ಈ ಸಮಾರಂಭದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಚುನಾವಣೆ ಪೂರ್ವದಲ್ಲಿ ಸಾರ್ವಜನಿಕರಿಗೆ ನೀಡಲಾಗಿದ್ದ ಎಲ್ಲಾ ಭರವಸೆಗಳನ್ನು ಸರ್ಕಾರ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ನುಡಿದಂತೆ ನಡೆಯುತ್ತಿದೆ ಎಂದರು.

ಆಯವ್ಯಯದಲ್ಲಿ 35,000 ಕೋಟಿ ರು 5 ವಿವಿಧ ಯೋಜನೆಗಳಿಗೆ ಮೀಸಲಿಡಲಾಗಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾರೆ, ಅನ್ನ ಭಾಗ್ಯ ಯೋಜನೆಯಡಿ ನೀಡಲಾದ 5 ಕೆ.ಜಿ ಆಹಾರ ಧಾನ್ಯದ ಹಣವನ್ನು ಜನರು ತರಕಾರಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ‌ಖರೀದಿಸಿ ಹಲವಾರು ಫಲಾನುಭವಿಗಳು ಸಂತೋಷ ವ್ಯಕ್ತ ಪಡಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ 496097 ವಿದ್ಯುತ್ ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ಅರ್ಹರು.

ಜಿಲ್ಲೆಯಲ್ಲಿ 500438 ವಿದ್ಯುತ್ ಗ್ರಾಹಕರಿದ್ದು, 496097 ವಿದ್ಯುತ್ ಗ್ರಾಹಕರು 200 ಯುನಿಟ್ ಒಳಗಡೆ ಉಪಯೋಗಿಸುತ್ತಿದ್ದು, ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಿರುತ್ತಾರೆ.

ಜುಲೈ 27 ರ‌ ಅಂತ್ಯದವರೆಗೆ 433266 ಗ್ರಾಹಕರು ನೊಂದಣಿ ಮಾಡಿಕೊಂಡಿರುತ್ತಾರೆ. 200 ಯುನಿಟ್ ಕ್ಕಿಂತ ಹೆಚ್ಚು ಯುನಿಟ್ ನ್ನು 4341 ವಿದ್ಯುತ್ ಗ್ರಾಹಕರು ಬಳಸುತ್ತಿದ್ದಾರೆ ಎಂದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ‌ ಅವರು ಮಾತನಾಡಿ ಭವಿಷ್ಯದ ದೃಷ್ಟಿಯಿಂದ ಬಡವರು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡುವಲ್ಲಿ ಸಹಕಾರಿಯಾಗುವಂತಹ ಯೋಜನೆಗಳನ್ನು ರೂಪಿಸಿ ಸರ್ಕಾರ ಜಾರಿಗೆ ತರುತ್ತಿದೆ. ಅದರಲ್ಲಿ ಶಕ್ತಿ ಯೋಜನೆ ಅಡುಗೆ ಮನೆಯಲ್ಲಿದ್ದ ಮಹಿಳೆಯರನ್ನು ನಿರ್ಭಯವಾಗಿ ಹೊರಗಡೆ ಆರ್ಥಿಕ ಪರಿಸ್ಥಿತಿಯನ್ನು ಚಿಂತಿಸದೇ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಉಚಿತವಾಗಿ ಓಡಾಡುವ ಶಕ್ತಿ ನೀಡಿದೆ ಎಂದರು.

ಶಾಸಕರಾದ ರವಿಕುಮಾರ್ ಅವರು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿರುವ 80% ರಷ್ಟು ವಿದ್ಯುತ್ ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ ನೊಂದಣಿ ಮಾಡಿಕೊಂಡಿದ್ದಾರೆ. ಜನಗಳಿಂದ ಪಡೆದ ತೆರಿಗೆ ಹಣವನ್ನು ವಿವಿಧ ಯೋಜನೆಗಳಡಿ ಜನರಿಗೆ ನೀಡಲಾಗುತ್ತಿದೆ. ಗೃಹ ಜ್ಯೋತಿ, ಶಕ್ತಿ ಹಾಗೂ ಅನ್ನ ಭಾಗ್ಯ ಯೋಜನೆಯಿಂದ ಉಳಿತಾಯವಾಗುತ್ತಿರುವ ಹಣವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗವೇಕು ಎಂದರು‌.

ಮಂಡ್ಯ ತಾಲ್ಲೂಕಿನ ಅಭಿವೃದ್ಧಿಗೆ 750 ಕೋಟಿ ರು :

ಮಂಡ್ಯ ತಾಲ್ಲೂಕಿಗೆ ಇಂಧನ ಇಲಾಖೆಯಿಂದ ವಿದ್ಯುತ್ ಸರಬರಾಜಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು 400 ಕೆ.ವಿ ಸ್ಥಾವರನ್ನು ಹಂಪಾಪುರ ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿದೆ. ಇದರ ಯೋಜನಾ ವೆಚ್ಚ 600 ಕೋಟಿ ರೂ ಆಗಿರುತ್ತದೆ. 30 ಕೋಟಿ ರೂ ವೆಚ್ಚದಲ್ಲಿ ಬೇಬಿ ಮತ್ತು ಹುಲಿವಾಹನಕ್ಕೆ 12 ಕೆ.ವಿ
ಎರಡು ಸ್ಟೇಷನ್ ಪ್ರಾರಂಭಿಸಲಾಗುವುದು. ಮಂಡ್ಯ ನಗರದ ಅಭಿವೃದ್ಧಿಗಾಗಿ 25 ಕೋಟಿ ರೂ ಹಾಗೂ
ಮೈ ಶುಗರ್ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ 50 ಕೋಟಿ ರೂ ಅನುದಾನ ಸರ್ಕಾರ ನೀಡಿದೆ ಎಂದರು.ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 3 ವರ್ಷ ಜೈಲು

ಕಾರ್ಯಕ್ರಮದಲ್ಲಿ‌ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಚಾ.ವಿ.ಸ.ನಿ.ನಿ ಅಧೀಕ್ಷಕ ಇಂಜಿನಿಯರ್ ಕೃಷ್ಣ ಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Share This Article
Leave a comment