ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಈ ಸಂತಸದ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.
ನಾರ್ಮಲ್ ಡೆಲಿವರಿ ಮೂಲಕ ಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು , ಮೊದಲ ಮಗುವನ್ನು ಪಡೆದುಕೊಂಡು ಡಾರ್ಲಿಂಗ್ ಕೃಷ್ಣ ಕುಟುಂಬ ಸಂಭ್ರಮದಲ್ಲಿದೆ.ರೇಣುಕಾಸ್ವಾಮಿ ಹತ್ಯೆ ಕೇಸ್ : ಕೋರ್ಟ್ ಗೆ ಶೀಟ್’ ಸಲ್ಲಿಕೆ – ದರ್ಶನ್ A2, ಪವಿತ್ರಾಗೌಡ A1 ಅರೋಪಿ
ಈ ಜರ್ನಿಯಲ್ಲಿ ಮಿಲನಾ ನಾಗರಾಜ್ ಅನುಭವಿಸಿದ ನೋವು, ಮಾಡಿದ ತ್ಯಾಗ, ತೋರಿದ ಧೈರ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಜರ್ನಿಯಲ್ಲಿ ಸಾಗುವ ಎಲ್ಲ ತಾಯಂದಿರಿಗೆ ನನ್ನ ಸೆಲ್ಯೂಟ್. ಇದನ್ನು ನೋಡಿ ನನಗೆ ಮಹಿಳೆಯರ ಮೇಲೆ ಇದ್ದ ಗೌರವ ದುಪ್ಪಟ್ಟಾಗಿದೆ. ಇಂದು ಮಗಳು ಜನಿಸಿರೋದು ನನಗೆ ಹೆಮ್ಮೆಯಿದೆ. ನಾನೊಬ್ಬ ಅದೃಷ್ಟವಂತ ತಂದೆ” ಎಂದು ಡಾರ್ಲಿಂಗ್ ಕೃಷ್ಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.