ಮನುಷ್ಯ ಆರೋಗ್ಯ ಸ್ಥಿತಿಗತಿ ಅರಿಯಲು ಮೈಕ್ರೋ ಚಿಪ್ ಅಳವಡಿಕೆ ಯಶಸ್ವಿ

Team Newsnap
1 Min Read

ಮನುಷ್ಯನ ದೇಹದಲ್ಲಿ ಅಳವಡಿಸಬಹುದಾದ ಅತೀ ಚಿಕ್ಕ ಮೈಕ್ರೋಚಿಪ್‌ ಅನ್ನು ರೂಪಿಸಿರುವ ಕೊಲಂಬಿಯಾ ವಿ ವಿ ತಜ್ಞರು ಜಗತ್ತಿನ ಗಮನ ಸೆಳೆದಿದ್ದಾರೆ.

ಸಾಮಾನ್ಯವಾಗಿ, ಇಂಜೆಕ್ಷನ್‌ ಸೂಜಿಯ ಆಂತರಿಕ ವ್ಯಾಸ 0.071 ಇಂಚು ಇರುತ್ತದೆ. ಈ ಚಿಪ್‌ ಅದಕ್ಕಿಂತ ಚಿಕ್ಕ ಗಾತ್ರದ್ದಾಗಿದೆ. (0.013), ಇಂಜೆಕ್ಷನ್‌ ಸೂಜಿಯ ಮೂಲಕವೇ ದೇಹದೊಳಗೆ ಈ ಚಿಪ್‌ ಅನ್ನು ಅಳವಡಿಸಬಹುದು.

ಇದು ದೇಹದ ಉಷ್ಣಾಂಶದ ಗ್ರಹಿಕೆ ಮಾಡುತ್ತದೆ. ‌ಈ ಚಿಪ್‌, ಶರೀರದ ಆಂತರಿಕ ಅವಯವಗಳ ಒಳಗೆ ಆಗುವ ಬದಲಾವಣೆಗಳನ್ನು, ಸಣ್ಣ ಏರಿಳಿತವನ್ನೂ ಗ್ರಹಿಸಿ, ಮಾಹಿತಿ ರವಾನಿಸುತ್ತದೆ.

ದೇಹದ ಅಂಗಾಂಶಗಳಲ್ಲಿನ‌ ಆಮ್ಲಜನಕ ಪ್ರಮಾಣ, ನರಗಳಲ್ಲಿ ಉತ್ಪತ್ತಿಯಾಗುವ ನ್ಯೂರಾನ್‌ ಡಸ್ಟ್‌ ಹಾಗೂ ಇನ್ನಿತರ ಸಂವೇದನೆಗಳನ್ನು ನೀಡುತ್ತವೆ.

ರೇಡಿಯೋ ಫ್ರೀಕ್ವೆನ್ಸಿ ತರಂಗಗಳ ಮೂಲಕ ಬರುವ ಈ ಮಾಹಿತಿಯನ್ನು ಅಧ್ಯಯನ ಮಾಡಬಹುದು. ಇದರಿಂದ ಮನುಷ್ಯನ ಆರೋಗ್ಯದ ಮೇಲೆ ಸತತ ನಿಗಾ ಇಡಲು, ಅಪಾಯಗಳಿಂದ ಕಾಪಾಡಲು ಸಹಾಯಕವಾಗಲಿದೆ.

Share This Article
Leave a comment