January 7, 2025

Newsnap Kannada

The World at your finger tips!

BJP , Rowdy , Ticket

Membership of 'Silent Sunil' canceled by BJP ಬಿಜೆಪಿಯಿಂದ 'ಸೈಲೆಂಟ್ ಸುನೀಲ್' ಸದಸ್ಯತ್ವ ರದ್ದು

ಬಿಜೆಪಿಯಿಂದ ‘ಸೈಲೆಂಟ್ ಸುನೀಲ್’ ಸದಸ್ಯತ್ವ ರದ್ದು

Spread the love

ಬೆಂಗಳೂರು ಬಿಜೆಪಿ ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದುಗೊಳಿಸಿದೆ.

ಸುನೀಲ್ ಬಿಜೆಪಿ ಸೇರಿದ ಬಗ್ಗೆ ಫೋಟೋ ವೈರಲ್ ಬೆನ್ನಲ್ಲೇ ಹಲವು ರಾಜಕೀಯ ಟೀಕೆಗಳು ಕೇಳಿಬಂದಿತ್ತು, ಈ ಬೆನ್ನಲ್ಲೇ ಬೆಂಗಳೂರು ಬಿಜೆಪಿ ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದುಗೊಳಿಸಿದೆ, ಸುನೀಲ್ ಹೆಸರಿನ ಸದಸ್ಯತ್ವಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ರೌಡಿಗಳಿಗೆ ಬಿಜೆಪಿ ಮಣೆ ಹಾಕುತ್ತಿದೆ, ಬಿಜೆಪಿ ರೌಡಿಗಳ ಸಾಮ್ರಾಜ್ಯವಾಗುತ್ತಿದೆ ಎಂದು ವಿಪಕ್ಷಗಳು ಭಾರೀ ಟೀಕೆ ಮಾಡಿದ್ದವು. ರೌಡಿ ಶೀಟರ್ ಆಗಿದ್ದಂತ ಸೈಲೆಂಟ್ ಸುನೀಲ್ ಬಿಜೆಪಿ ನಾಯಕರನ್ನು ರಕ್ತದಾನ ಶಿಬಿರಕ್ಕೆ ಆಹ್ವಾನಿಸಿ, ಕಾರ್ಯಕ್ರಮ ಮಾಡಿದ್ದರ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪಿಸಿತ್ತು. ಅಲ್ಲದೇ ರೌಡಿಗಳ ತಾಣವಾಗುತ್ತಿದೆ ಬಿಜೆಪಿ ಎಂಬುದಾಗಿ ವಾಗ್ಧಾಳಿ ನಡೆಸಿತ್ತು.

ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್ ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೇಳಿದ್ದರು.ಇದನ್ನು ಓದಿ –ವಿಜಯಪುರದಲ್ಲಿ ಕೇಂದ್ರ ಸಚಿವ ಜೋಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅವಘಡ

Copyright © All rights reserved Newsnap | Newsever by AF themes.
error: Content is protected !!