ದೇವೇಗೌಡರ ಅನಾರೋಗ್ಯ : 100 ಕಿಮಿ ರೋಡ್ ಶೋ ರದ್ದು

Team Newsnap
1 Min Read
BJP-JDS alliance decision considering the situation at that time - Deve Gowda ಅಂದಿನ ಪರಿಸ್ಥಿತಿ ನೋಡಿಕೊಂಡು ಬಿಜೆಪಿ - ಜೆಡಿಎಸ್ ಮೈತ್ರಿ ನಿರ್ಧಾರ

ಅನಾರೋಗ್ಯದ ಹಿನ್ನೆಲೆಯಲ್ಲಿ ಎಚ್ ಡಿ ದೇವೇಗೌಡರ 100 ಕಿಮಿ ರೋಡ್ ಶೋ ಕಾರ್ಯಕ್ರಮ ರದ್ದಾಗಿದೆ.

ಪಂಚರತ್ನ ರಥಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯುವ ಮೊದಲು ಜೆಡಿಎಸ್‌ ವರಿಷ್ಠ ಹೆಚ್‌.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆಯಬೇಕಿದ್ದ 100 ಕಿ.ಮೀ ರೋಡ್‌ ಶೋ ವೈದ್ಯರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೋಡ್‌ ಶೋ ಬದಲಿಗೆ ಕೇವಲ ಸಮಾರೋಪ ಸಮಾರಂಭ ಮಾಡಲು ನಿರ್ಧರಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಹೆಚ್‌.ಡಿ.ದೇವೇಗೌಡರು ಪಾಲ್ಗೊಳ್ಳಲಿದ್ದಾರೆ.

ರೋಡ್‌ ಶೋ ರದ್ದುಗೊಳಿಸಿರುವ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ.‌ಕುಮಾರಸ್ವಾಮಿ, ವೈದ್ಯರ ಸಲಹೆ ಮೇರೆಗೆ 100 ಕಿಮೀ ರೋಡ್ ಶೋ ರದ್ದು ಮಾಡಲಾಗಿದೆ. ದೇವೇಗೌಡರ ಆರೋಗ್ಯ ಸ್ಥಿತಿ ಸರಿಯಿಲ್ಲ.

ವೈದ್ಯರು ಈ‌ ಸಮಯದಲ್ಲಿ ಇಷ್ಟು ದೊಡ್ಡ ರೋಡ್ ಶೋ ಬೇಡ ಅಂತಾ ಹೇಳಿದ್ದಾರೆ. ಹೀಗಾಗಿ ರೋಡ್ ಶೋ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.‌

ಸಮಾವೇಶ ಜಾಗದಲ್ಲಿ 2ರಿಂದ 3 ಕಿ.ಮೀ ರೋಡ್ ಶೋ ಮಾಡ್ತೀವಿ ಅಷ್ಟೆ. ಮೈಸೂರಿನಲ್ಲಿ‌‌ ನಿಗದಿಯಂತೆ ಸಮಾರಂಭ ಸಮಾರಂಭ ನಡೆಯುತ್ತದೆ ಎಂದು ಹೇಳಿದ್ದಾರೆ.ಇದನ್ನು ಓದಿ –ಬಿಜೆಪಿಯಿಂದ ‘ಸೈಲೆಂಟ್ ಸುನೀಲ್’ ಸದಸ್ಯತ್ವ ರದ್ದು

Share This Article
Leave a comment