March 13, 2026

Newsnap Kannada

The World at your finger tips!

meghana child

ಗಂಡು ಮಗುವಿಗೆ ಜನ್ಮ ನೀಡಿದ ಮೇಘನಾ ರಾಜ್

Spread the love

ಸರ್ಜಾ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಕೆಲ ತಿಂಗಳ ಹಿಂದಷ್ಟೇ ಗಂಡ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿದ್ದ ನಟಿ ಮೇಘನಾ ರಾಜ್​ ಈಗ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್​ ಸರ್ಜಾ ಆಗಮನವಾಗಿದೆ.

ವೈದ್ಯರು ಡೇಟ್​ ಕೊಟ್ಟ ಹಿನ್ನೆಲೆಯಲ್ಲಿ ಮೇಘನಾ ರಾಜ್​ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಜನ್ಮದಿನ ಆಚರಣೆ ಮಾಡಿತ್ತು ಸರ್ಜಾ ಕುಟುಂಬ. ಅದೇ ದಿನವೇ ಮೇಘನಾಗೆ ಹೆರಿಗೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಕೆಲ ದಿನ ಬಿಟ್ಟು ಜೂನಿಯರ್​ ಚಿರು ಆಗಮಿಸಿದ್ದಾನೆ. ವಿಶೇಷ ಎಂದರೆ, ಇಂದು ಚಿರು ಸರ್ಜಾ- ಮೇಘನಾ ನಿಶ್ಚಿತಾರ್ಥದ ದಿನ. ಅದೇ ದಿನವೇ ಮೇಘನಾಗೆ ಮಗುವಾಗಿದೆ.

ಮೇಘನಾ ರಾಜ್​ಗೆ ಮಗು ಜನಿಸುತ್ತಿದ್ದಂತೆ ಚಿರು ಸರ್ಜಾ ಅಜ್ಜಿ ಲಕ್ಷ್ಮೀದೇವಿ ಆಸ್ಪತ್ರೆಯಿಂದ ಹೊರಬಂದು, ಸ್ವೀಟ್ಸ್ ಖರೀದಿಸಿದ್ದಾರೆ. ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವುದು ಎಲ್ಲರಲ್ಲೂ ಸಂತಸ ತಂದಿದೆ. ಇತ್ತೀಚೆಗೆ ಅದ್ದೂರಿಯಾಗಿ ಮೇಘನಾಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.

error: Content is protected !!