ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದ ನಟಿ ಮೇಘಾ ಶೆಟ್ಟಿ. ಧಾರಾವಾಹಿಯಲ್ಲಿ ಯಶಸ್ಸು ಸಿಗುತ್ತಿದ್ದಂತೆಯೇ, ಅವರಿಗೀಗ ಸ್ಯಾಂಡಲ್‌ವುಡ್‌ನಲ್ಲಿ ಅವಕಾಶದ ಬಾಗಿಲು ತೆರೆದಿದೆ.
‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಜೊತೆಗೆ ಮೊದಲ ಬಾರಿಗೆ ಸಿನಿಮಾದಲ್ಲಿ ನಾಯಕಿಯಾಗುವ ಆಫರ್ ಗಿಟ್ಟಿಸಿಕೊಂಡಿದ್ದಾರೆ ಅವರು. ಇದೀಗ ಆ ಬಗ್ಗೆ ಮೇಘಾ ಮಾತನಾಡಿದ್ದಾರೆ. ‘ಸಿನಿಮಾಕ್ಕೆ ಬರಲು ಇದಕ್ಕಿಂತ ದೊಡ್ಡ ಅವಕಾಶ ಇನ್ನೊಂದಿಲ್ಲ’ ಎಂದಿದ್ದಾರೆ.
‘ಅಕ್ಟೋಬರ್ 21ರಿಂದ ಮೈಸೂರಿನಲ್ಲಿ ‘ತ್ರಿಬ್ಬಲ್ ರೈಡಿಂಗ್’ ಶೂಟಿಂಗ್ ಆರಂಭಿಸಿದ್ದೆವು. ಈಗ ನನ್ನ ಪಾಲಿನ ಒಂದು ಹಂತದ ಚಿತ್ರೀಕರಣವನ್ನು ಮುಗಿಸಿದ್ದೇನೆ. ಮತ್ತೊಂದು ಹಂತದ ಚಿತ್ರೀಕರಣಕ್ಕೆ ತಂಡ ಸಜ್ಜಾಗಿದೆ. ನಾನಂತೂ ಈ ಶೂಟಿಂಗ್ ಅನುಭವವನ್ನು ಎಂಜಾಯ್ ಮಾಡಿದ್ದೇನೆ. ಇಡೀ ತಂಡ ತುಂಬ ಪ್ಯಾಷನ್ ಇಟ್ಟುಕೊಂಡಿದೆ’ ಎಂದಿರುವ ಅವರು, ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
‘ತ್ರಿಬ್ಬಲ್ ರೈಡಿಂಗ್’ನಲ್ಲಿ ಕಾಮಿಡಿ, ಡ್ರಾಮಾ, ಸಾಹಸ, ಸಸ್ಪೆನ್ಸ್ ಎಲ್ಲವೂ ಮಿಕ್ಸ್ ಆಗಿದೆಯಂತೆ! ‘ನಾನಿಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿದ್ದೇನೆ. ಇದು ಸಿನಿಮಾಗೆ ಬರುವುದಕ್ಕೆ ಸರಿಯಾದ ವೇದಿಕೆ ಎನಿಸುತ್ತದೆ’ ಎಂದಿದ್ದಾರೆ ಅವರು.
‘ನಾವು ಸಿರೀಯಲ್‌ಗೆ ಈ ಹಿಂದೆಯೇ ಶೂಟಿಂಗ್ ಶುರು ಮಾಡಿದ್ದೆವು. ಹಾಗಾಗಿ, ಸದ್ಯಕ್ಕೆ ಯಾವುದೇ ಆತಂಕ ಇಲ್ಲ. ಸುರಕ್ಷತೆಯೊಂದಿಗೆ ರಾಜಿಯಾಗದೆ ಕೆಲಸ ಮಾಡುತ್ತಿದ್ದೇವೆ. ‘ತ್ರಿಬ್ಬಲ್ ರೈಡಿಂಗ್’ ಮತ್ತು ‘ಜೊತೆ ಜೊತೆಯಲಿ’ ತಂಡಗಳು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತವೆ’ ಎಂದಿದ್ದಾರೆ ಮೇಘಾ.
‘ನನಗೆ ಸಿನಿಮಾಗಳಿಂದ ಹೆಚ್ಚಿನ ಅವಕಾಶಗಳು ಬರುತ್ತಿವೆ ಎಂಬುದನ್ನು ಒಪ್ಪುತ್ತೇನೆ. ಆದರೆ, ನನಗೆ ಯಾವುದು ಇಂಟರೆಸ್ಟಿಂಗ್ ಎನಿಸುತ್ತದೆಯೋ, ಅದನ್ನಷ್ಟೇ ಒಪ್ಪಿಕೊಳ್ಳುತ್ತೇನೆ. ಇನ್ನು, ನನಗೆ ಜನಪ್ರಿಯತೆ ತಂದುಕೊಟ್ಟಿರುವ ಧಾರಾವಾಹಿ ಬಗ್ಗೆ ಒಂದು ಜವಾಬ್ದಾರಿ ಇದೆ. ಸದ್ಯಕ್ಕಂತೂ ನಾನು ಕಿರುತೆರೆಗೆ ಗುಡ್‌ಬೈ ಹೇಳುವುದಿಲ್ಲ’ ಎಂದಿದ್ದಾರೆ ಮೇಘಾ ಶೆಟ್ಟಿ.
More Stories
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ