ಮಂಡ್ಯ ಜಿಲ್ಲೆಯಲ್ಲಿರುವ ಪತ್ರಕರ್ತರ ಸಂಘದ ಮೇಲಂತಸ್ತಿನ ಕಟ್ಟಡ ಶಂಕು ಸ್ಥಾಪನಾ ಕಾಮಗಾರಿಯನ್ನು ರೇಷ್ಮೆ, ಪೌರಾಡಳಿತ, ತೋಟಗಾರಿಕಾ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ. ನಾರಾಯಣಗೌಡರು ಜ್ಯೋತಿ ಬೆಳಗಿಸುವದರ ಮುಖಾಂತರ ನೆರವೇರಿಸಿದರು.
ಮಂಡ್ಯದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ, ಮೇಲಂತಸ್ತಿನ ಕಟ್ಟಡಕ್ಕೆ ಹಾಗೂ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘಕ್ಕೆ ವಂತಿಗೆ ನೀಡಿದ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭಗಳನ್ನು ನಡೆಸಿಕೊಡಲಾಯ್ತು.
ಕಾರ್ಯಕ್ರಮದಲ್ಲಿ ಚೆಲುವರಾಯಸ್ವಾಮಿ, ಸಿ.ಎಸ್. ಪುಟ್ಟರಾಜು, ನರೇಂದ್ರ ಸ್ವಾಮಿ, ಡಿ.ಸಿ. ತಮ್ಮಣ್ಣ, ತಗಡೂರು ಶಿವಾನಂದ, ಮತ್ತಿಕೆರೆ ಜಯರಾಂ,ಜಿಲ್ಲಾ ಅಧ್ಯಕ್ಷ ಕೆ ಸಿ ಮಂಜುನಾಥ್ ಮತ್ತಿತರು ಉಪಸ್ಥಿತರಿದ್ದರು.
More Stories
ಸಪ್ತಪದಿ ತುಳಿದ ಮೂರೇ ದಿನದಲ್ಲಿ ಹೃದಯಾಘಾತದಿಂದ ನವವಿವಾಹಿತ ಅಕಾಲಿಕ ಸಾವು
ಏ.7 ಕ್ಕೆ ಮೇಲುಕೋಟೆ ವೈರಮುಡಿ ಉತ್ಸವ
ಮಂಡ್ಯದಲ್ಲಿ ಭೀಕರ ಅಪಘಾತ: ಸಾಫ್ಟ್ವೇರ್ ಇಂಜಿನಿಯರ್ ದಾರುಣ ಸಾವು