February 22, 2026

Newsnap Kannada

The World at your finger tips!

super moon

ಮೇ. 26ಕ್ಕೆ ಸೂಪರ್ ಮೂನ್, ಚಂದ್ರಗ್ರಹಣ, ರಕ್ತ ಚಂದ್ರ‌ ಗೋಚರ

Spread the love

ಮೇ 26ರಂದು ನೀಲಾಆಕಾಶದಲ್ಲಿ ಮೂರು ಅಪರೂಪದ ದೃಶ್ಯಗಳನ್ನು ಕಾಣಬಹುದಾಗಿದೆ.

ಈ ವರ್ಷದ ಮೊದಲ ಚಂದ್ರಗ್ರಹಣ ಮೇ. 26ರಂದು ಸಂಭವಿಸುವ ಚಂದ್ರಗ್ರಹಣ ವಿಶೇಷವಾಗಿರಲಿದೆ. ಅದೇ ದಿನ ಸೂಪರ್‌ಮೂನ್‌ ಹಾಗೂ ರೆಡ್​ ಬ್ಲಡ್​ ಮೂನ್ ( ರಕ್ತ ಚಂದ್ರ) ಕೂಡ ಗೋಚರವಾಗಲಿದೆ.

ಮೇ.26ರಂದು ಆಸ್ಟ್ರೇಲಿಯಾ, ಜಪಾನ್‌, ಅಮೆರಿಕಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಸೂಪರ್‌ಮೂನ್‌ ದರ್ಶನವಾಗಲಿದೆ.

  • ಚಂದ್ರ ಭೂಮಿಗೆ ತುಂಬಾ ಹತ್ತಿರವಿದ್ದ ಸಮಯದಲ್ಲೇ ಹುಣ್ಣಿಮೆ ಅಥವಾ ಅಮಾವಾಸ್ಯೆ ಬಂದರೆ ಆಗ ಸೂಪರ್​ಮೂನ್ ಸಂಭವಿಸುತ್ತದೆ.
  • ಚಂದ್ರ ಎಂದಿಗಿಂತ ಹೆಚ್ಚು ದೊಡ್ಡದಾಗಿ ಹಾಗೂ ಪ್ರಕಾಶಮಾನವಾಗಿ ಕಾಣುತ್ತದೆ.
  • ಚಂದ್ರ ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವರಿಸಿದಾಗ ಅದು ಕಪ್ಪಾಗುತ್ತದೆ. ಆದರೆ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ. ಬದಲಾಗಿ ಕೆಂಪು ಬಣ್ಣದಿಂದ ಕಾಣುತ್ತದೆ.
error: Content is protected !!