60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ : ಸಿಎಂ ಸಿದ್ದರಾಮಯ್ಯ

Team Newsnap
2 Min Read

ಒಮಿಕ್ರಾನ್‌ ಉಪತಳಿ JN.1  ತಳಿಯಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ‌ ಎಚ್ಚರಿಕೆ ಕ್ರಮ ಅನುಸರಿಸಬೇಕು. ಮಾಸ್ಕ್ ಕಡ್ಡಾಯ ಮಾಡಲ್ಲ. ಕಡ್ಡಾಯ ಮಾಡುವ ಪರಿಸ್ಥಿತಿ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ, ಹೋಂ, ಡಿಸಿಎಂ, ಸಿಎಸ್, ಹಣಕಾಸು, ತಜ್ಞರ ಸಮಿತಿ ಜೊತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಮೂವರು ಕೊರೊನಾದಿಂದ ಮೃತರಾಗಿದ್ದಾರೆ. ಆದರೆ ಅವರು ಕೋವಿಡ್ ನಿಂದಲೇ ಸತ್ತಿದ್ದಾರೆ ಅನ್ನೋಕೆ ಆಗಲ್ಲ. ಅವರಿಗೆ ಬೇರೆ ಬೇರೆ ಸಮಸ್ಯೆ ಇತ್ತು. ಅವರಿಗೆ ಕೋವಿಡ್ ಪಾಸಿಟಿವ್ ಇತ್ತು .

ಆರೋಗ್ಯ ಸಚಿವರು ಈಗಾಗಲೇ ಸಭೆ ಮಾಡಿದ್ದಾರೆ ತಜ್ಞರ ಸಲಹೆಗಳನ್ನು ಪಡೆದಿದ್ದೇವೆ. ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನೆ. ಆಕ್ಸಿಜನ್, ಬೆಡ್, ಔಷಧಿ ಯಾವುದೂ ಕೊರತೆ ಆಗಬಾರದು. ಬೇರೆ ಕಾಯಿಲೆ‌ ಇರೋರಿಗೂ ಚಿಕಿತ್ಸೆ ಕೊಡಲು ಸೂಚನೆ ನೀಡಲಾಗಿದೆ.

 ಲಸಿಕೆ ಅಭಿಯಾನ ಕೂಡಾ ಅಗತ್ಯವಿದ್ದರೆ ಶುರು ಮಾಡಲು ತಿಳಿಸಿದ್ದೇನೆ. ಯಾರು ತೆಗೆದುಕೊಂಡಿಲ್ಲ ಅವರು ಲಸಿಕೆ ಪಡೆಯಬೇಕು ಎಂದರು.ಯಾವುದೇ ಕೊರತೆ ಆಗದಂತೆ ಸೂಚನೆ ನೀಡಿದ್ದೇನೆ.

JN.1 ಓಮ್ರಿಕಾನ್ ಉಪತಳಿಯಾಗಿದೆ. ಕರ್ನಾಟಕದಲ್ಲಿ 92 ಜನ ಪಾಸಿಟಿವ್ ಇದೆ ಅಂತ ಮಾಹಿತಿ ಇದೆ. ಇದರಲ್ಲಿ ಬೆಂಗಳೂರಿನಲ್ಲಿ 80, ಮೈಸೂರು 5, ಬಳ್ಳಾರಿ 3, ರಾಮನಗರ ಹಾಗೂ ಮಂಡ್ಯದಲ್ಲಿ 1 ಕೇಸ್ ಇದೆ. 72 ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 7 ಮಂದಿ ಐಸಿಯುನಲ್ಲಿ ಇದ್ದಾರೆ ಎಂದು ತಿಳಿಸಿದರು.

ಗಡಿ ಜಿಲ್ಲೆಯಲ್ಲಿ ಹೆಚ್ಚು ಟೆಸ್ಟ್ ಮಾಡಬೇಕು. ಜನಸಂದಣಿ ಇರುವಲ್ಲಿ ಮಾಸ್ಕ್ ಹಾಕಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಟೆಸ್ಟ್ ಗೆ ದರ ನಿಗದಿ ಇನ್ನೂ ಆಗಿಲ್ಲ. ಕ್ಯಾಬಿನೆಟ್ ಸಬ್ ಕಮಿಟಿ ಇದನ್ನ ತೀರ್ಮಾನ ಮಾಡುತ್ತೆ. ಇಂದು ಕ್ಯಾಬಿನೆಟ್ ನಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ‌ಮಾಡ್ತೀವಿ. ಎಷ್ಟು ಹಣ ಬೇಕೋ ಅಷ್ಟು ಹಣ ಕೊರೊನಾ ನಿಯಂತ್ರಣಕ್ಕೆ ಕೊಡ್ತೀವಿ ಎಂದರು.

Share This Article
Leave a comment