December 19, 2024

Newsnap Kannada

The World at your finger tips!

WhatsApp Image 2022 06 01 at 8.37.43 AM

ಪ್ರೀತಿಸಿದವನನ್ನು ಮದುವೆಯಾಗಲು ಬಾಂಗ್ಲಾದಿಂದ ಈಜಿ ಭಾರತಕ್ಕೆ ಬಂದ ಯುವತಿ

Spread the love

ಯುವತಿಯೋರ್ವಳು ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಲು ಬಾಂಗ್ಲಾ ದೇಶದಿಂದ ಭಾರತಕ್ಕೆ ನದಿಯಲ್ಲಿ ಈಜಿ ಬಂದಿರುವ ಘಟನೆ ನಡೆದಿದೆ. ಬಾಂಗ್ಲಾದೇಶ ಮೂಲದ ಕೃಷ್ಣ ಮಂಡಲ್ ಹಾಗೂ ಭಾರತ ಮೂಲದ ಅಭಿಕ್ ಮಂಡಲ್​ ನಡುವೆ ಪ್ರೇಮ ಹುಟ್ಟಿತ್ತು.

ಫೇಸ್​ಬುಕ್​​​​ನಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಇದೇ ಪ್ರೀತಿ ಅಂತರಾಷ್ಟ್ರೀಯ ಗಡಿ ರೇಖೆ ದಾಟಿಸುವಂತೆ ಮಾಡಿದೆ. ಕೃಷ್ಣ ಮಂಡಲ್​ ಬಳಿ ಪಾಸ್​ಪೋರ್ಟ್​ ಇಲ್ಲದ ಕಾರಣ ಬಾಂಗ್ಲಾದೇಶದಿಂದ ಭಾರತಕ್ಕೆ ನದಿಯಲ್ಲಿ ಈಜಿ ಬರುವ ಪ್ಲಾನ್​ ಮಾಡಿದಳು.

ಬಾಂಗ್ಲಾದೇಶದ ಡೇಂಜರಸ್ ಆಗಿರೋ ಹುಲಿಗಳ ಕಾಡು ಅಂತಲೇ ಕರೆಯಲ್ಪಡುವ ಸುಂದರ್​​ಬನ್ಸ್ ಕಾಡನ್ನು ದಾಟಿದ್ದಾಳೆ. ಅಲ್ಲದೆ ಮಟ್ಲಾದ ನದಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಈಜಿ ಪ್ರಿಯತಮೆ ಕೃಷ್ಣ ಗಡಿ ದಾಟಿದ್ದಾಳೆ. ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಇವರಿಬ್ಬರ ಮದುವೆ ಕೂಡ ನಡೀತು.

ಇದನ್ನು ಓದಿ – ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ – ಸೋನಿಯಾಗೆ ರಾಜೀನಾಮೆ ಪತ್ರ ರವಾನೆ

ಆದರೆ ಅಕ್ರಮ ಗಡಿ ಪ್ರವೇಶದ ಕಾರಣ ಬಂಗಾಳದ ನರೇಂದ್ರಪುರ ಠಾಣಾ ಪೊಲೀಸರು ಕೃಷ್ಣಳನ್ನು ವಶಕ್ಕೆ ಪಡೆದು. ಮೂಲಗಳ ಮಾಹಿತಿಯ ಅನ್ವಯ, ನಂತರ ಬಾಂಗ್ಲಾದೇಶದ ಕಮಿಷನರ್​​ಗೆ ಕೃಷ್ಣಳನ್ನು ಹಸ್ತಾಂತರಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!