ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ – ಸೋನಿಯಾಗೆ ರಾಜೀನಾಮೆ ಪತ್ರ ರವಾನೆ

Team Newsnap
1 Min Read

ಸುಪ್ರೀಂ ಕೋರ್ಟ್ ವಕೀಲ ಹಾಗೂ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ತಾವು ಕಾಂಗ್ರೆಸ್ ಪಕ್ಷಕ್ಕೆ ಏಕೆ ರಾಜೀನಾಮೆ ಕೊಟ್ಟು ಹೊರ ಬಂದಿದ್ದೇನೆ ಎಂಬುದರ ಬಗ್ಗೆ ಫೇಸ್ ಬುಕ್ ನಲ್ಲಿ ಭಾವನಾತ್ಮಕವಾಗಿ ಬ್ರಿಜೇಶ್ ಪತ್ರ ಬರೆದಿದ್ದಾರೆ.

ಈಗಿನ ಪಕ್ಷದ ಬೆಳವಣಿಗೆ ಹಾಗೂ ವಿದ್ಯಮಾನಗಳಿಂದ ಉತ್ಸಾಹದ ಕೊರತೆ ಇದೆ. ನಾನು ಪಕ್ಷದ ಬೆಳವಣಿಗೆಗೆ ಸಾಕಷ್ಟು ಶ್ರಮ ಹಾಕಿದ್ದೇನೆ ಎಂದಿದ್ದಾರೆ, ಇದುವರೆಗೂ ಕಾಂಗ್ರೆಸ್ ಪರವಾಗಿ ನಾನು 6497 ಡಿಬೆಟ್ ಗಳಲ್ಲಿ ಪಾಲ್ಗೊಂಡಿದ್ದೇನೆ ಎಂದು ಹೇಳಿದ್ದಾರೆ.

ಫೇಸ್ ಬುಕ್ ನಲ್ಲಿರುವ ಪತ್ರದ ಸಾರಾಂಶ :

ತಮ್ಮ ಫೇಸ್​​ಬುಕ್​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬ್ರಿಜೇಶ್​ ಕಾಳಪ್ಪ1997ರಲ್ಲಿ ಆರಂಭವಾದ ಕಾಂಗ್ರೆಸ್​​ನೊಂದಿಗಿನ ಒಡನಾಟಕ್ಕೆ ಫುಲ್​​​ಸ್ಟಾಪ್​ ಹಾಕಿದ್ದಾರೆ.

ಇದನ್ನು ಓದಿ –ಹನುಮ ಮಾಲಾಧಾರಿಗಳಿಂದ ಜೂನ್ 4 ರಂದು ಶ್ರೀರಂಗಟ್ಟಣದ ಜಾಮಿಯಾ ಮಸೀದಿ ಪ್ರವೇಶಕ್ಕೆ ಸಿದ್ಧತೆ

ಇದೇ ವೇಳೆ ತಮ್ಮನ್ನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ ಸಚಿವ ಸ್ಥಾನದೊಂದಿಗೆ ನೇಮಕಗೊಂಡಿದಕ್ಕೆ ಧನ್ಯವಾದ, ಈ ಹಿನ್ನೆಲೆಯಲ್ಲಿ 1997ರಲ್ಲಿ ಆರಂಭವಾದ ಒಡನಾಟ ಕೊನೆಗೊಳಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a comment