ಪಾರ್ಲರ್ ಹೋಗಿದ್ದ ವಧುವಿನ ಮೊಬೈಲ್‍ಗೆ ಬಂದ ಮೆಸೇಜ್ ಏನು ಗೊತ್ತಾ? ಮದುವೆಯೇ ರದ್ದಾಗಿದೆ ಎಂದು. ಈ ಮೆಸೇಜ್ ವಧುವಿಗೆ ಆಘಾತ ತಂದಿತು.
ಉತ್ತರಪ್ರದೇಶದ ಕಾನ್ಪುರದಲ್ಲಿ ಫಿಕ್ಸ್ ಆಗಿದ್ದ ಮದುವೆ ತಾಳಿ ಕಟ್ಟುವ ಕೆಲವೇ ಗಂಟೆಗಳ ಮುನ್ನ ಕ್ಯಾನ್ಸಲ್ ಆಗಿದೆ.
ಕಾನ್ಪುರದ ಕಂಗಗಂಜ್ ಕಾಲೋನಿ ನಿವಾಸಿ ಪುಷ್ಪಗೆ ಕರೌಲಿ ಗ್ರಾಮದ ನಿವಾಸಿ ಕ್ರಾಂತಿ ಸಿಂಗ್ ಜೊತೆ ಏಪ್ರಿಲ್ 28ರಂದು ಮದುವೆ ನಿಶ್ಚಯವಾಗಿತ್ತು. ಮದುವೆಯ ಸಂಭ್ರಮದಲ್ಲಿದ್ದ ವಧು ಇನ್ನೇನು ಕೆಲವೇ ಗಂಟೆಗಳಲ್ಲಿ ಮದುವೆಯ ಮೆರವಣಿಗೆ ಹೊರಡುವವಳಿದ್ದಳು.
ಅದಕ್ಕೂ ಮುನ್ನ ಮೇಕಪ್ ಮಾಡಿ ಕೊಳ್ಳಲೆಂದು ಪಾರ್ಲರ್ ಗೆ ತೆರಳಿದ್ದಾಳೆ. ಈ ವೇಳೆ ವಧುವಿನ ಮೊಬೈಲ್ ಗೆ ಬಂದ ಮೆಸೇಜ್ ‘ ನಿಮ್ಮ ಮದುವೆ ಕ್ಯಾನ್ಸಲ್ ‘ ಆಗಿದೆ ಎಂದು.
ಕ್ಯಾನ್ಸಲ್‍ಗೆ ಕಾರಣವೇನು..?
ವಧುವಿನ ಕಡೆಯವರು ಮದುವೆಗೆ 30 ಲಕ್ಷ ಖರ್ಚು ಮಾಡಿದ್ದಾರೆ. ಅಲ್ಲದೆ ವರನಿಗೆ 12 ಲಕ್ಷ ಮೌಲ್ಯದ ಕಾರು ಕೊಡಿಸಿದ್ದಾರೆ. ಇನ್ನಷ್ಟು ವರದಕ್ಷಿಣೆ ಬೇಕು ಎಂದು ವರನ ಕಡೆಯವರು ಹಠ ಹಿಡಿದು ಮದುವೆ ಕ್ಯಾನ್ಸಲ್ ಮಾಡಿದ್ದಾರೆ.
ಪ್ರಕರಣ ಈಗ ಪೋಲಿಸ್ ಠಾಣೆಯ ಮೆಟ್ಟಿಲೇರಿದೆ.
More Stories
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ