ಫುಟ್ಬಾಲ್ ಲೋಕದ ದಂತ ಕಥೆ ಮರಡೋನ ನಿಧನ

Team Newsnap
1 Min Read

ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಡಿಯೋಗೊ ಮರಡೋನಾ (60) ಹೃದಯಾಘಾತದಿಂದ ನಿಧನರಾದರು.

ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಫುಟ್ಬಾಲ್ ಲೋಕದ ದಂತಕಥೆಯಾಗಿ ಮೆರೆದವರು ಮರಡೋನಾ.

skysports diego maradona argentina 5160270 1

ಅರ್ಜೆಂಟೀನಾ ಪರವಾಗಿ 4 ಬಾರಿ ವಿಶ್ವ ಫುಟ್ಬಾಲ್ ಪಂದ್ಯದಲ್ಲಿ ಪಾಲ್ಗೊಂಡಿದ್ದ ಮರಡೋನಾ ಫುಟ್ಬಾಲ್ ಪ್ರೀಯರ ಅಚ್ಚು ಮೆಚ್ಚಿನ ಆಟಗಾರರಾಗಿದ್ದರು.

ಹಲವಾರು ಕ್ಲಬ್ ಗಳಿಗೂ ಆಟವಾಡಿದ್ದ ಮರಡೋನ ಗೋಲ್ಡನ್ ಬಾಯ್ ಎಂದೂ ಸಹ ಖ್ಯಾತ ನಾಮರಾಗಿದ್ದರು.

ಫುಟ್ ಬಾಲ್ ಅಭಿಮಾನಿಗಳ ಪಾಲಿಗೆ ದೇವರು ಎಂದು ಪೂಜೆ ಮಾಡುತ್ತಿದ್ದ ಹುಚ್ಚು ಅಭಿಮಾನಿಗಳೂ ಇದ್ದರು.ವಿಶ್ವದ ಎಲ್ಲಾ ಕಡೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದ ಫುಟ್ಬಾಲ್ ತಾರೆಯಾಗಿದ್ದರು.ಆಟ ಅಂದ್ರೆ ಮರಡೋನಾ ಆಟ ಎನ್ನುತ್ತಿದ್ದರು.
ಅಕ್ಟೋಬರ್ 30 ರಂದು 60 ವರ್ಷದ ಕೇಕ್ ಕತ್ತರಿಸಿದ್ದ ಮರಡೋನಾ 16 ವಯಸ್ಸಿನಿಂದಲೇ ಫುಟ್ಬಾಲ್ ಆಟ ಆಡುತ್ತಿದ್ದರು. ಮರಡೋನಾ ಜೀವನದ ಆಟ ಪೂರ್ತಿ ನಿಂತಿದೆ. ಫುಟ್ ಬಾಲ್ ಲೋಕದ ಪ್ರಜ್ವಲ ತಾರೆಗೆ ವಿದಾಯ.

48d4f713 6a93 4440 9b22 7e677f464009 edited
Share This Article
Leave a comment