December 19, 2024

Newsnap Kannada

The World at your finger tips!

WhatsApp Image 2022 05 25 at 4.42.04 PM

ಮಂಗಳಮುಖಿ ಸರ್ಕಾರ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬೇಸರ

Spread the love

ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ ಅಲ್ಲ, ಮಂಗಳಮುಖಿ ಸರ್ಕಾರ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮ್ಮನ್ನು ಹೀಗೆ ಅವಮಾನ ಮಾಡಬಾರದಿತ್ತು ಸರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು!’ ಎಂದು ಉಲ್ಲೇಖಿಸಿದ್ದಾರೆ.

WhatsApp Image 2022 05 25 at 4.41.20 PM

ಸಿ.ಎಂ. ಇಬ್ರಾಹಿಂ ಹೇಳಿಕೆ ?

ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ, ಮಂಗಳಮುಖಿ ಸರ್ಕಾರ ಈ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ಈ ಮಂಗಳಮುಖಿ ಸರ್ಕಾರದಿಂದ ಮುಕ್ತಿಪಡೆಯೋಣ. ಇವರ ಜತೆ ಜಗಳ ಆಡುವುದಕ್ಕೂ ಆಗಲ್ಲ, ಗಂಡಸರಾದರೆ ಗಂಡಸರನ್ನು ಕಳುಹಿಸಬಹುದು ಹೆಂಗಸರಾದರೆ ಹೆಂಗಸರನ್ನು ಕಳುಹಿಸಬಹುದು. ಇದು ಗಂಡಸೂ ಅಲ್ಲ ಹೆಂಗಸೂ ಅಲ್ಲ, ಕೈ ತಟ್ಟುತ್ತಾರೆ. ನಾವು ಹಿಂದೆ ಸರಿಯಬೇಕಾಗುತ್ತದೆ. ಎಷ್ಟು ಬೈದರೂ ಎಷ್ಟು ಉಗಿದರೂ ಹ್ಹಿ ಹ್ಹಿ ಹ್ಹೀ ಅಂತಾರೆ’ ಎಂದು ಸಿ.ಎಂ. ಇಬ್ರಾಹಿಂ ಅವರು ರಾಯಚೂರಿನ ಮುದಗಲ್‌ನಲ್ಲಿ ಇತ್ತೀಚೆಗೆ ಹೇಳಿದ್ದರು.

ಇಬ್ರಾಹಿಂ ಹೇಳಿಕೆಯ ವರದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ‘ನನ್ನ ತಂದೆ ಕೂಡ ಹೀಗೆ ಹೇಳಿದ್ದರು- ಗಂಡಾಗಿದ್ದರೆ ಕೆಲಸ ಕೊಡಿಸುತ್ತಿದ್ದೆ, ಹೆಣ್ಣಾಗಿದ್ದರೆ ಮದುವೆ ಮಾಡಿಸುತ್ತಿದ್ದೆ, ಕುರುಡ ಕುಂಟ ಆಗಿದ್ದರೆ ಮನೆಯಲ್ಲೇ ಇರಿಸಿಕೊಂಡು ಊಟ ಹಾಕುತ್ತಿದ್ದೆ.

Copyright © All rights reserved Newsnap | Newsever by AF themes.
error: Content is protected !!