ಗುರುವಾರ ನಡೆದ ಮಣಿಪುರ ಸಚಿವ ಸಂಪುಟ ಪುನರ್‌ರಚನೆಯ ವೇಳೆ ಇಬ್ಬರು ಶಾಸಕರನ್ನು ಸಂಪುಟದಿಂದ ಕೈ ಬಿಟ್ಟಿದೆ. ಇದರಿಂದ ಕೋಪಗೊಂಡ ಎನ್‌ಪಿಪಿ ಸದಸ್ಯರು ಗೌಹಾಟಿಯಲ್ಲಿ ಸಭೆ ನಡೆಸಿ, ಎನ್‌ಪಿಪಿ ರಾಷ್ಟ್ರಾಧ್ಯಕ್ಷ ಹಾಗೂ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರೊಡನೆ ಚರ್ಚೆ ಮಾಡಿದ್ದಾರೆ.
ಭಾನುವಾರ ರಾತ್ರಿ ಸಂಗ್ಮಾ ಅವರೊಂದಿಗಿನ ಮತ್ತೊಂದು ಸುತ್ತಿನ ಮಾತುಕತೆಯ ನಂತರ ಭಾಜಪ-ಎನ್‌ಪಿಪಿ ಮೈತ್ರಿ ಮುಂದುವರೆಯುತ್ತದೋ ಇಲ್ಲವೋ ಎಂದು ತಿಳಿದು ಬರಲಿದೆ.
ಸಂಪುಟದಿಂದ ಕೈಬಿಟ್ಟ ಹಿನ್ನಲೆಯಲ್ಲಿ ಎನ್‌ಪಿಪಿ ಶಾಸಕರೊಬ್ಬರು ಅಸಮಾಧಾನಗೊಂಡು ‘ಅಮಿತ್ ಶಾ ನಮಗೆ ಭರವಸೆ ನೀಡಿದ್ದರು. ಆದರೆ ಈಗ ನಮಗೆ ದ್ರೋಹ ಮಾಡಲಾಗಿದೆ. ನಮ್ಮನ್ನು ಸಂಪುಟದಿಂದ ಕೈ ಬಿಡಲಾಗಿದೆ’ ಎಂದು ತಿಳಿಸಿದರು.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಬಿಜೆಪಿಯ ಮೂರು ಶಾಸಕರು ಸೇರಿ ಒಟ್ಟು 6 ಶಾಸಕರನ್ನು ಸಂಪುಟದಿಂದ ಕೈ ಬಿಡಲಾಗಿದೆ.
ಸಧ್ಯ, ಎನ್‌ಪಿಪಿಯ ಶಾಸಕ, ಉಪಮುಖ್ಯಮಂತ್ರಿ ವೈ ಜೋಯ್ ಕುಮಾರ್ ಸಿಂಗ್, ಸಚಿವ ಲೆಟ್ಪೌ ಹೌಕಿಪ್, ಸಂಪುಟದಿಂದ ಕೈಬಿಡಲಾದ ಎಲ್ ಜಯಂತಕುಮಾರ್, ಎನ್ ಕಯಿಸಿ ಗುವಾಹಟಿಯಲ್ಲಿದ್ದಾರೆ.
More Stories
ಕೇಂದ್ರ ಬಜೆಟ್ 2025: ಕರ್ನಾಟಕಕ್ಕೆ ಅಪೇಕ್ಷಿತ ಅನುದಾನ ಇಲ್ಲ?
ಮಧ್ಯಮ ವರ್ಗಕ್ಕೆ ಶುಭವಾರ್ತೆ: 12 ಲಕ್ಷ ರೂ. ಆದಾಯದವರೆಗೆ ತೆರಿಗೆ ವಿನಾಯಿತಿ
ಜೆಟ್ ವಿಮಾನ ಪತನ: 6 ಮಂದಿ ಸಾವು, ಹಲವಾರು ಮನೆಗಳಿಗೆ ಬೆಂಕಿ