December 21, 2024

Newsnap Kannada

The World at your finger tips!

WhatsApp Image 2023 04 16 at 8.10.01 AM

ಮ್ಯಾಂಗೋ ಬರ್ಫಿ ▪️

Spread the love
WhatsApp Image 2023 04 15 at 3.01.09 PM 1
ಧನ್ಯವಾದಗಳು
ಮೀನಾಕ್ಷಿ ವಾಲಿ
ಬೆಳಗಾವಿ

ಮಾವಿನ ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.ಈಗ ಮಾವಿನ ಸೀಜನ್ ಬೇರೆ.ಮಾವು ಅಂದ್ರೆ ಹಣ್ಣುಗಳ ರಾಜನೇ ಆಗಿರುವಾಗ ಈ ಮಾವಿನಹಣ್ಣಿನಲ್ಲಿ ಏನಾದ್ರೂ ಮಾಡಬಹುದು ಅಲ್ವ.ಹಾಗೇ ನಾನೂ ಈವತ್ತು ಮಾವಿನಹಣ್ಣು ಬಳಸಿ ಮ್ಯಾಂಗೋ ಬರ್ಫಿ ಮಾಡಿ ತಂದಿರುವೆ.

▪️ಬೇಕಾಗುವ ಸಾಮಗ್ರಿಗಳು

1 ಕಪ್ ಮಾವಿನ ಹಣ್ಣಿನ ಪಲ್ಪ್
3/4 ಕಪ್ ಸಕ್ಕರೆ
2 ಸ್ಪೂನ್ ತುಪ್ಪ
1 ಸ್ಪೂನ್ ಏಲಕ್ಕಿ ಪುಡಿ
2 ಸ್ಪೂನ್ ಕಾರ್ನ್ ಫ್ಲೋರ್
ಸಣ್ಣಗೆ ಕಟ್ ಮಾಡಿದ ಡ್ರೈ ಫ್ರೂಟ್ಸ್

▪️ಮಾಡುವ ವಿಧಾನ

ಕಾರ್ನ್ ಫ್ಲೋರ್ ಅನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಕಲೆಸಿಕೊಳ್ಳಿ.
ಅದರಲ್ಲಿ ಗಂಟು ಇರಬಾರದು.

ಒಂದು ದಪ್ಪ ತಳದ ಅಥವಾ ನಾನ್ ಸ್ಟಿಕ್ ಬಾಣಲೆಯಲ್ಲಿ ಕಲಸಿಟ್ಟ ಕಾರ್ನ್ ಫ್ಲೋರ್ ಮಿಶ್ರಣ,ತುಪ್ಪ,ಸಕ್ಕರೆ ಹಾಕಿ ಕುದಿಯಲು ಇಡಿ.ಕೈ ಬಿಡದೇ ಕೈಯಾಡ್ತಾ ಇರಬೇಕು.

ಇದು 7/8 ನಿಮಿಷ ಮದ್ಯಮ ಉರಿಲಿ ಇರಬೇಕು.ಅದು ಗಂಟಾಗದೆ ಇರುವಂತೆ ನೋಡಿಕೊಳ್ಳಬೇಕು.

ನಂತ್ರ ಸ್ವಲ್ಪ ಗಟ್ಟಿಯಾದಾಗ ಸಣ್ಣ ಉರಿ ಮಾಡಿ ಮಾವಿನ ಹಣ್ಣಿನ ಪಲ್ಪ್/ಪೇಸ್ಟ್,ಏಲಕ್ಕಿ ಹಾಕಿ ಮಿಕ್ಸ್ ಮಾಡಿ.ಸಣ್ಣ ಉರಿ ಮಾಡಿ ಕೈಯಾಡ್ತಾ ಇದ್ದು, ಗಟ್ಟಿಯಾಗುವವರೆಗೆ ಕುದಿಸಿ ಡ್ರೈ ಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ
ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕಟ್ ಮಾಡಿ ಸವಿಯಿರಿ.ಅಷ್ಟೇ ಸಿಂಪಲ್ ಆದ್ರೂ ಬೇಕರಿಲಿ ಸಿಗುವ ಬರ್ಫಿಗಿಂತಲೂ ರುಚಿಕರವಾದ ಆರೋಗ್ಯಕರವಾದ ಹಾಗೂ ಮನೆಲೇ ಮಾಡಿ ತಿನ್ನುವ ಖುಷಿಯ ಮುಂದೆ ಬೇರೆ ಏನೂ ಇಲ್ಲ ಅಲ್ವ.

Copyright © All rights reserved Newsnap | Newsever by AF themes.
error: Content is protected !!