December 25, 2024

Newsnap Kannada

The World at your finger tips!

71c34370 4c36 4259 9bbc 85b6e5d561d4

ಮಂಗಳೂರಿನ ಮಾಡೆಲ್ ಪ್ರೇಕ್ಷಾ ಅನುಮಾಸ್ಪದ ಸಾವು : 20 ಮಂದಿ ಯವಕರು ಪೋಲಿಸ್ ವಶಕ್ಕೆ

Spread the love

ನಿಗೂಢವಾಗಿ ಸಾವನ್ನಪ್ಪಿರುವ ಮಂಗಳೂರಿನ ಮಾಡೆಲ್, ಕಾಲೇಜು ವಿದ್ಯಾರ್ಥಿನಿ ಪ್ರೇಕ್ಷಾ ಸಾವಿನ ಪ್ರಕರಣ ಕ್ಕೆ ಸಂಬಂಧಿಸಿದಂತೆ 20 ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಡೆಲಿಂಗ್ ಪೋಟೋ ಶೂಟ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಲಿದ್ದ ಯುವತಿಯ ಶವ ಮನೆಯಲ್ಲಿ ಎಸ್ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪ್ರೇಕ್ಷಾ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಸಾವಿಗೂ ಮುನ್ನ ಮನೆಗೆ ಬಂದಿದ್ದಾರೆ ಎನ್ನಲಾಗುತ್ತಿರುವ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರಾಟ ಜಾಲದ ಸುಳಿವು:

ulalla

ಪ್ರೇಕ್ಷಾ ಹಾಗೂ ಆಕೆಯ ಪ್ರಿಯಕರನ ವಿಚಾರವನ್ನೇ ಬೇರೆಯವರು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಪ್ರೇಕ್ಷಾ ಸಾವಿನ ವಿಚಾರದಲ್ಲಿ ಗಾಂಜಾ ಮಾರಾಟದ ಜಾಲದ ಆರೋಪವೂ ಕೇಳಿಬಂದಿದೆ. ಹೀಗಾಗಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ.

ಇದೀಗ ಸ್ಥಳೀಯ 20 ಯುವಕರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಮಾತ್ರವಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಂದಿಯನ್ನೂ ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ.

ಪ್ರೇಕ್ಷಾ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನೊಂದೆಡೆ ಮನೆಯ ಹಿಂಬಾಗಿಲ ಚಿಲಕ ಒಡೆದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Copyright © All rights reserved Newsnap | Newsever by AF themes.
error: Content is protected !!